ತ್ರಿಲಿಂಗೇಶ್ವರ ಇಂಟರ್ನ್ಯಾಷನಲ್ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟಿಸಿದ ಅಭಿನವ ಶ್ರೀ ಗವಿಶಿದ್ದೇಶ್ವರ ಸ್ವಾಮಿಗಳು
ಯಲಬುರ್ಗಾ : ಮುಧೋಳದಲ್ಲಿ ಶ್ರೀ ತ್ರಿಲಿಂಗೇಶ್ವರ ಇಂಟರ್ನ್ಯಾಷನಲ್ ಪೂರ್ವ ಪ್ರಾಥಮಿಕ ಶಾಲೆಯನ್ನು ಅಭಿನವ ಶ್ರೀ ಗವಿಶಿದ್ದೇಶ್ವರ ಸ್ವಾಮಿಗಳು ಉದ್ಘಾಟಿಸಿದರು.
ಮುಧೋಳದಲ್ಲಿ ೫೦ ವರ್ಷಗಳ ಹಿಂದೆ ಹಿರಿಯರು ಗ್ರಾಮಸ್ಥರು ಪ್ರೌಢಶಾಲೆ ಆರಂಭಿಸಿ ಶೈಕ್ಷಣಿಕ ಕ್ರಾಂತಿಮಾಡಿದ್ದಾರೆ.ಇಂದು ಹೊಸ ಕನಸಿನೊಂದಿಗೆ ನೂತನ ಶಾಲೆ ಆರಂಭವಾಗುತ್ತಿರುವದು ಉತ್ತಮ ಬೆಳವಣಿಗೆ ಎಂದು ಆಶೀರ್ವದಿಸಿದರು.
ದಿ.ಸಂಪತ್ ಕುಮಾರ ಕೆ.ಪಲ್ಲೇದ ಇವರ ಸ್ಮರಣಾರ್ಥ ರಾಜಣ್ಣ ಪಲ್ಲೇದ ಅವರು ೧ ಲಕ್ಷ ರೂ ಸ್ಥಿರನಿಧಿ ಸ್ಥಾಪಿಸಿದ್ದು ಅದರ ಬಡ್ಡಿಯಿಂದ ಬರುವ ಹಣದಲ್ಲಿ ಪ್ರತಿಭಾ ೨೦೨೪ ರ SSLC ಪರೀಕ್ಷೆಯಲ್ಲಿ ಉನ್ನತ ಸ್ಥಾನಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು.
ತ್ರಿಲಿಂಗೇಶ್ವರ ಸಮಿತಿಯ ಅಧ್ಯಕ್ಷರು,ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಡಾ, ಸುನಿಲ್ ಕುಮಾರ್ ದೇಸಾಯಿ ಅವರಿಂದ ರಿಬ್ಬನ್ ಕಟ್ ಮಾಡಿಸಲಾಯಿತು, ಅಧ್ಯಕ್ಷರು ಚಂದ್ರು ದೇಸಾಯಿ, ಆನಂದ್ ಉಳಗಡ್ಡಿ ಯಲಬುರ್ಗಾ, ವಿರನಗೌಡ ಗೌಡರ, ಈಶಪ್ಪ ಜಿವೋಜಿ, ಅಪ್ಪಣ್ಣ ಪಲ್ಲೆದ, ಈರಣ್ಣ ಕಮತರ್, ಡಾ, ಅಂದಾಮಯ್ಯ ಶಾಡ್ಲಗೇರಿ ಮಠ, ಚಂದಲಿಂಗಪ್ಪ ಎಲ್ಲಿಗಾರ್ ಕೊಪ್ಪಳ, ನಾಗಪ್ಪ ಓಲಿ, ಹೇಮರಡ್ಡಿ ರಡ್ಡೆರ, ಕಳಕಪ್ಪ ಕುರಿ, ರಾಜಣ್ಣ ಪಲ್ಲೆದ, ಶರಣಪ್ಪ ಪುರ್ತಗೇರಿ, ಎಲ್ಲಪ್ಪ ಹುನಗುಂದ, ಇಮಾಮಸಾಬ್ ಹಿರೇಮನಿ, ಚತ್ರೇಪ್ಪ ಚಲುವಾದಿ, ಶ್ರೀ ತ್ರಿಲಿಂಗೇಶ್ವರ ಸೇವಾ ಸಮಿತಿಯ ಸರ್ವ ಸದಸ್ಯರು, ಶಾಲಾ ಮಕ್ಕಳು ಆಗ ಶಿಕ್ಷಣ ಪ್ರೇಮಿಗಳೆಲ್ಲರೂ ಹಾಗೂ ಗ್ರಾಮದ ಸಾರ್ವಜನಿಕರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು,
Comments are closed.