ಕೃಷ್ಣ ಇಟ್ಟಂಗಿ ಸ್ಪಷ್ಟೀಕರಣ
ಕೊಪ್ಪಳ, ಮೇ 30,: ಕರ್ನಾಟಕ ವಿಧಾನ ಪರಿಷತ್ ಅಂಗವಾಗಿ ನಡೆದಿರುವ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಅಂಗವಾಗಿ, ಆಯಾ ಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳ ಪರ ಮತ ಯಾಚನೆಗೆ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಿರುವುದು ಸರಿಯಷ್ಟೇ.
ಆ ಪ್ರಕಾರ, ಇತರೆಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ ಹಾಗೆ ಎಂಎಲ್ಸಿ ಹೇಮಲತಾ ನಾಯಕ್ ಅವರು ನಾನು ಅಧ್ಯಕ್ಷನಾಗಿರುವ ಭಾಗ್ಯನಗರದ ಪಯೋನೀರ್ ಪಬ್ಲಿಕ್ ಶಾಲೆಗೂ ಆಗಮಿಸಿದ್ದರು. ಬಂದವರು ಯಾರೇ ಆಗಿದ್ದರೂ, ಅವರನ್ನು ಕೂರಿಸಿ ಮಾತನಾಡುವ ಸಂಪ್ರದಾಯ ನಮ್ಮದು. ಆ ಪ್ರಕಾರ, ಅನ್ಯಪಕ್ಷದವರಾಗಿದ್ದರೂ, ಹೇಮಲತಾ ನಾಯಕ್ ಅವರಿಗೆ ನಮ್ಮ ಶಾಲೆಯಲ್ಲಿ ಮತ ಕೇಳಲು ಅವಕಾಶ ನೀಡಲಾಗಿತ್ತು.
ಈ ಸನ್ನಡತೆಯ ಕ್ರಮವನ್ನು ಕೆಲವರು ವಿಪರೀತವಾಗಿ ಬಿಂಬಿಸುವ ಪ್ರಯತ್ನ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷನಾಗಿದ್ದ ನಾನು ಅಡ್ಮಿಶನ್ ಅವಧಿಯ ಈ ಸಮಯದಲ್ಲಿ ಶಾಲೆಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಅಂತಹ ಸಮಯದಲ್ಲಿ, ಹೇಮಲತಾ ನಾಯಕ್ ಅವರು ಶಾಲೆಗೆ ಆಗಮಿಸಿದ್ದರಿಂದ, ಅಲ್ಲಿ ನಾನೂ ಇದ್ದೆನೇ ಹೊರತು ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ.
ಕಾಂಗ್ರೆಸ್ನ ಕಟ್ಟಾ ಕಾರ್ಯಕರ್ತನಾಗಿ ನನ್ನ ಪಕ್ಷ ನಿಷ್ಠೆ ಪ್ರಶ್ನಾತೀತ. ಅಲ್ಲದೇ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವುದರಿಂದ, ಇಂತಹ ಕಪೋಲಕಲ್ಪಿತ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಸ್ಪಷ್ಟೀಕರಣ ನೀಡಿದ್ದಾರೆ
Comments are closed.