ಯೋಗ ದಿನಾಚರಣೆ ಪ್ರಯುಕ್ತ ಯೋಗಪ್ರೇರಣಾ ಕಾರ್ಯಕ್ರಮ
ಯೋಗವು ಇಂದಿನ ದಿನಮಾನದ ಮಾನಸಿಕ ಒತ್ತಡಕ್ಕೆ ದಿವ್ಯೌಷಧಿಯಾಗಿದೆ. ಈ ಮಹತ್ವವನ್ನು ಅರಿತು ವಿಶ್ವದಾದ್ಯಂತ ಪ್ರತಿವರ್ಷ ೨೧ ಜೂನ್ ರಂದು ವಿಶ್ವಯೋಗ ದಿನವನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ವಿಭಾಗದಿಂದ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದಿನಾಂಕ ೩೧-೦೫-೨೦೨೪ ರಿಂದ ೨೦-೦೬-೨೦೨೪ ರವರೆಗೆ ಯೋಗsಪ್ರೇರಣಾ ಯೋಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಯೋಗಕ್ರಿಯೆಗಳನ್ನು ಮತ್ತು ಯೋಗದಿಂದ ಆರೋಗ್ಯದ ಮಹತ್ವ ಕುರಿತು ಉಪನ್ಯಾಸ ನೀಡಲಾಗುತ್ತಿದೆ.
ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥರಾದ ಡಾ. ಪ್ರಭು. ಸಿ. ನಾಗಲಾಪೂರ ಮಾತನಾಡಿ ಯೋಗವು ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಕಾರಣವಾಗಿದೆ. ಪ್ರತಿಯೊಬ್ಬರಿಗೂ ತರಬೇತಿ ನೀಡುವ ಮೂಲಕ ಯೋಗ ಜ್ಞಾನವನ್ನು ಹರಡಬೇಕು ಎಂದು ಕರೆ ನೀಡಿದರು.
ಈ ಯೋಗ ಶಿಬಿರದಲ್ಲಿ ಸ್ವಸ್ಥವೃತ್ತ ವಿಭಾಗದ ಉಪನ್ಯಾಸಕರಾದ ಡಾ|| ಅಮಲ್ ಚಂದ್ರನ್, ಡಾ|| ಆಶಾ. ಎಸ್. ಎ., ಡಾ. ನವೀನಕುಮಾರ ಇವರುಗಳು ೨೧ ದಿನದ ಯೋಗ ಕಾರ್ಯಕ್ರಮದಲ್ಲಿ ವಿವಿಧ ಆಸನ ಹಾಗೂ ಕ್ರಿಯೆಗಳ ತರಬೇತಿ ಮತ್ತು ಉಪನ್ಯಾಸ ನೀಡುವರು. ಯೋಗ ತರಬೇತಿಯನ್ನು ಕಾಲೇಜಿನ ಎರಡನೇ ಮಹಡಿಯಲ್ಲಿ ಬೆಳಿಗ್ಗೆ ೦೬ ರಿಂದ ೦೭ ರವರೆಗೆ ಆಯೋಜಿಸಲಾಗಿದ್ದು ಆಸಕ್ತ ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳುಬಹುದೆಂದು ತಿಳಿಸಲಾಗಿದೆ.
Comments are closed.