ಸ್ಕಿಜೋಫ್ರೇನಿಯಾ ಖಾಯಿಲೆಯನ್ನು ಆರಂಭದಲ್ಲೇ  ಗುರುತಿಸುವುದು ಮುಖ್ಯ: DHO ಡಾ.ಲಿಂಗರಾಜು ಟಿ.

Get real time updates directly on you device, subscribe now.

ಸ್ಕಿಜೋಫ್ರೇನಿಯಾ ಒಂದು ತೀವ್ರತರದ ಮಾನಸಿಕ ಖಾಯಿಲೆಯಾಗಿದ್ದು, ಮೆದುಳಿನ ರಾಸಾಯನಿಕ ವಸ್ತುಗಳಲ್ಲಿ ಆಗುವ ಅಸಮತೋಲನದಿಂದ ಈ ರೋಗ ಸ್ಥಿತಿಯು ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯದಲ್ಲಿ ರೋಗ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮಖರಾಗಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಗರಾಜು ಟಿ. ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಛೇರಿ ಕೊಪ್ಪಳ ಹಾಗೂ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಟನಕನಕಲ್ ಇವರ ಸಹಯೋಗದಲ್ಲಿ ಸರಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಅಂಗವಾಗಿ ಮೇ 27 ರಂದು ಆಯೋಜಿಸಿದ್ದ ಮಾನಸಿಕ ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ರೀತಿಯ ಮಾನಸಿಕ ಖಾಯಿಲೆಯ ಲಕ್ಷಣಗಳು, ಭಾವನೆಗಳ ತೀವ್ರತರ ಏರಿಳಿತಗಳು, ನಡವಳಿಕೆಯಲ್ಲಿ ಬದಲಾವಣೆ ಕಂಡುಬAದಲ್ಲಿ ಕೂಡಲೇ ಹತ್ತಿರದ ಮನೋವೈದ್ಯರ ಬಳಿ ತಪಾಸಣೆಗೆ ಒಳಗಾಗಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ, ಆಪ್ತಸಮಾಲೋಚನೆ ಪಡೆಯುವುದರಿಂದ ಸ್ಕಿಜೋಫ್ರೇನಿಯಾದಂತ ಮಾನಸಿಕ ಖಾಯಿಲೆಗಳಿಂದ ಗುಣಮುಖರಾಗಬಹುದು. ಆರಂಭದಲ್ಲಿಯೇ ರೋಗ ಲಕ್ಷಣ ಗುರುತಿಸುವುದು ಬಹಳ ಮುಖ್ಯವಾಗಿದ್ದು, ಚಿಕಿತ್ಸೆಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಪ್ರಕಾಶ ಹೆಚ್. ಅವರು ಮಾತನಾಡಿ, ಈ ವರ್ಷದ ಘೋಷಣೆ ಸಮಾಜದ ದಯಾಳುತನದ ಶಕ್ತಿಯ ಆಚರಣೆ ಎಂಬುದಾಗಿದ್ದು, ಮಾನಸಿಕ ರೋಗಿಗೆ ಚಿಕಿತ್ಸೆ ಎಷ್ಟು ಮುಖ್ಯವೋ ಅದೇ ರೀತಿ ಕುಟುಂಬದ ಬೆಂಬಲ ಹಾಗೂ ಸಾಮಾಜಿಕ ಬೆಂಬಲ ಅತೀ ಮುಖ್ಯವಾಗುತ್ತದೆ. ಮಾನಸಿಕ ರೋಗಿಗಳಲ್ಲಿ ಹಾಗೂ ಅವರ ಪೋಷಕರಲ್ಲಿ ಕೀಳರಿಮೆ ಹಾಗೂ ಸಾಮಾಜಿಕ ಕಳಂಕವನ್ನು ತೊಡೆದು ಹಾಕುವುದರಲ್ಲಿ ಸಾಮಾಜ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ರವೀಂದ್ರನಾಥ ಅವರು ಮಾತನಾಡಿ, ಯುವಜನತೆ ನಾಡಿನ ಶಕ್ತಿ. ಅತಿಯಾದ ಆಸೆ, ನಿರೀಕ್ಷೆಗಳು ಜೀವನದಲ್ಲಿ ಒತ್ತಡಭರಿತ ಸನ್ನಿವೇಶವನ್ನುಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ಮಾನಸಿಕ ಸ್ಥೆರ್ಯವನ್ನು ಕಳೆದುಕೊಳ್ಳದೇ ಮಾನಸಿಕವಾಗಿ ಧೃಡವಾಗಿದ್ದರೆ ಇಂತಹ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಅತೀ ವಿರಳ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ.ಲಕ್ಷಿö್ಮÃದೇವಿ ಎಂ. ಪಾಟೀಲ ಅವರು, ಸ್ಕಿಜೋಫ್ರೇನಿಯಾ ರೋಗವನ್ನು ಹೊಂದಿರುವ ವ್ಯಕ್ತಿಯು ವಿಚಿತ್ರವಾಗಿ ವರ್ತಿಸುವುದು, ಅತೀಯಾಗಿ ಅನುಮಾನ ಪಡುವುದು ದೈನಂದಿನ ಕಾರ್ಯಗಳಲ್ಲಿ ವ್ಯತ್ಯಾಸವಾಗುವುದು ಹಾಗೂ ಯಾರಿಗೂ ಕಾಣಿಸಿದ ದೃಶ್ಯಗಳು ಕಾಣಿಸುವುದು, ಯಾರಿಗೂ ಕೇಳಿಸದ ಧ್ವನಿಗಳು ಕೇಳಿಸುವುದು ಈ ರೀತಿಯಾಗಿ ಲಕ್ಷಣಗಳನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಯನ್ನು ಬೇಗನೆ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡುವುದು ಹಾಗೂ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ಅನುಸರಿಸಿದರೆ ಈ ರೋಗದಿಂದ ಗುಣಮುಖರಾಗಬಹುದು. ಈ ಎಲ್ಲಾ ಮಾನಸಿಕ ತೊಂದರೆಗಳಿಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂದು ತಿಳಿಸಿದರು.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರಿ ತರಬೇತಿ ಅಧಿಕಾರಿ ದೇವಪ್ಪ ಕುರಿ ಅವರು ಮಾತನಾಡಿ, ಜೀವನದಲ್ಲಿ ಆರೋಗ್ಯವು ಅತೀ ಮುಖ್ಯವಾದ ಪಾತ್ರ ವಹಿಸಿದಂತೆ, ಮಾನಸಿಕ ಆರೋಗ್ಯವು ಸಹ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪ್ರಮುಖವಾಗಿದೆ. ಇಂತಹ ಅರಿವು ನೆರವು ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಕಡೆಗಮನ ಹರಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಂದಕುಮಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ|| ಶಶಿಧರ ಆಲೂರು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ|| ವೆಂಕಟೇಶ ಕೆ., ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಾನಂದ ವಿ ಪೂಜಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನಃಶಾಸ್ತçಜ್ಞರಾದ ಪುಷ್ಪಾ ಥೆರೇಸಾ, ಕಿರಿಯ ತರಬೇತಿ ಅಧಿಕಾರಿ ಮಮತಾ ಕೆ ಎಸ್., ವೀರಣ್ಣ ಅಂಗಡಿ, ಪ್ರವೀಣ ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!