ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವು
Koppal ::ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಹೊಸಲಿಂಗಪುರ ಗ್ರಾಮದ ಮನೆಯಲ್ಲಿಯೇ ತಾಯಿ, ಮಗಳು ಹಾಗೂ ಮೊಮ್ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ರಾಜೇಶ್ವರಿ (45), ವಸಂತಾ (22) ಹಾಗೂ ಸಾಯಿ (4) ಸಾವನ್ನಪ್ಪಿದ ದುರ್ದೈವಿ ಗಳು.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ನಿನ್ನೆ ರಾತ್ರಿ ರಾಜೇಶ್ವರಿಗೆ ಪೋನ್ ಮಾಡಿದ್ದ ಇನ್ನೊಬ್ಬ ಮಗಳು ಆದ್ರೆ ಪೋನ್ ರಿಸೀವ್ ಮಾಡಿರಲಿಲ್ಲಾ. ಬಾಗಿಲು ತಗೆದಿರಲಿಲ್ಲಾ ಹೀಗಾಗಿ ಇಂದು ಮುಂಜಾನೆ ಬಂದು ಪರಿಶೀಲನೆ ನಡೆಸಿದಾಗ ಸಾವಿನ ಬಗ್ಗೆ ಗೊತ್ತಾಗಿದೆ.
ಯಾರೋ ಕೊಲೆ ಮಾಡಿ ಪರಾರಿಯಾಗಿರೋ ಶಂಕೆ ವ್ಯಕ್ತವಾಗಿದೆ. ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ ರೂಮ್ ನಲ್ಲಿ ಪತ್ತೆ ಮಗಳ ಶವ ಕಿಚನ್ ನಲ್ಲಿ ಪತ್ತೆ
ವಸಂತಾಳಿಗೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜೊತೆ ವಿವಾಹವಾಗಿತ್ತು ಆದ್ರೆ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದ ವಸಂತಾ ನಂತರ ಹೊಸಲಿಂಗಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ವಸಂತಾಹೊಸ ಲಿಂಗಾಪುರ ಬಳಿ ಬೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಲು
ಅನ್ಯ ಧರ್ಮದ ವ್ಯಕ್ತಿ ಜೊತೆ ವಸಂತಾ ಸಂಬಂಧ ಹೊಂದಿದ್ದಳು ಎಂಬ ಆರೋಪ ಕೇಳಿಬಂದಿದೆ.
ಸ್ಥಳಕ್ಕೆ SP ಯಶೋದಾ ವಂಟಿಗೋಡೇ ಮುನಿರಾಬಾದ್ ಪೊಲೀಸರು ಹಾಗೂ ಗ್ರಾಮೀಣ ಠಾಣೆಯ cpi ಸುರೇಶ್ ಸೇರಿದಂತೆ ಇತರ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.