ಓದುವ ಸಂಸ್ಕೃತಿಯಿಂದ ಯುವಕರು ವಿಮುಖ : ಕಂಬಾಳಿಮಠ ಕಳವಳ

Get real time updates directly on you device, subscribe now.


ಕೊಪ್ಪಳ :ಇಂದಿನ ಪಾಶ್ಚಾತ್ಯ ಸಂಸ್ಕೃತಿಯಿಂದ ಯುವಕರುಓದುವ ಹವ್ಯಾಸದಿಂದದೂರವೇ ಉಳಿದಿದ್ದಾರೆ. ಮೊಬೈಲ್ ಬಳಕೆಯಿಂದ ಓದುವ ಸಂಸ್ಕೃತಿಯಿಂದಯುವಕರು ವಿಮುಖವಾಗುತ್ತಿದ್ದಾರೆ, ಇದುಅತ್ಯಂತ ಕಳವಳ ವಿಚಾರವಾಗಿದೆಎಂದು ಹಿರಿಯ ಸಾಹಿತಿ ಎಸ್.ಎಂ.ಕಂಬಾಳಿಮಠ ಅಭಿಪ್ರಾಯಪಟ್ಟರು.
ಅವರುಕೊಪ್ಪಳ ನಗರದತಾಲೂಕ ಪಂಚಾಯತ್ ಸಭಾಂಗಣದಲ್ಲಿರವಿವಾರಚನ್ನಬಸವ ಪ್ರಕಾಶನ, ಮಾನಸ ಪ್ರಕಾಶನ, ಸುಮಸಿರಿ ಕನ್ನಡ ಪ್ರಕಾಶನ ಹಾಗೂ ಕೊಪ್ಪಳ ಜಿಲ್ಲಾ ಸಿರಿಗನ್ನಡ ವೇದಿಕೆ ಇವರ ಸಹಯೋಗದಲ್ಲಿ ಶರಣಬಸಪ್ಪ ಬಿಳೆಎಲಿ ಹಾಗೂ ಮಂಜುನಾಥ.ಪ. ಚಿತ್ರಗಾರರ ‘ಸ್ಪಂದನಶೀಲ’ (ಜಿ.ಎಸ್. ಗೋನಾಳರ ಆಯ್ದ ಕೃತಿಗಳ ಅವಲೋಕನಗಳ ಸಂಗ್ರಹ) ಕೃತಿ ಲೋಕಾರ್ಪಣೆ, ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ, ಇಂದಿನ ಯುವಕರುಓದುವ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ.ಇದರಿಂದಜ್ಞಾನಾರ್ಜನೆಯ ಕುಸಿತಕ್ಕೆ ಕಾರಣವಾಗಿದೆ.ಆದ್ದರಿಂದ ಸಾಹಿತ್ಯ ಪರಂಪರೆಯನ್ನು ಬೆಳೆಸಲು ಪ್ರತಿಯೊಬ್ಬರು ಪುಸ್ತಕವನ್ನುಕೊಂಡುಓದುವ ಹವ್ಯಾಸವನ್ನು ಬೆಳೆಸಿ ಪ್ರಕಾಶಕರ ಮತ್ತು ಸಾಹಿತಿಗಳನ್ನು ಬೆಳೆಸುವ ಕೆಲಸಕ್ಕೆ ಮುಂದಾಗಬೇಕು, ಕನ್ನಡ ನಾಡು, ನುಡಿ, ಭಾಷೆ ಸಂಸ್ಕೃತಿಗಳು ಹೆಮ್ಮೆರವಾಗಿ ಬೆಳೆಯಬೇಕೆಂದರೆ ಕರುನಾಡಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ, ಅದರಲ್ಲೂ ವಿಶೇಷವಾಗಿ ಪುಸ್ತಕ ಸಂಸ್ಕೃತಿಯು ಪ್ರತಿಯೊಬ್ಬರ ಮನೆಮನದಲ್ಲೂ ಬೆಳೆಯಬೇಕೆಂದರು,
ಸ್ಪಂದನಶೀಲ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದಜಿ.ಪಂ.ನ ಮುಖ್ಯ ಲೆಕ್ಕಾಧಿಕಾರಿಅಮೀನ್‌ಅತ್ತಾರ್ ಮಾತನಾಡಿ, ವೈಚಾರಿಕ ಚಿಂತನೆಗಳು ಮಾನವನಲ್ಲಿಒಡಮೂಡಬೇಕಾದರೆ ಪುಸ್ತಕ ಓದುವ ಸಂಸ್ಕೃತಿಯತ್ತಜನರು ಒಲವು ತೋರಬೇಕು. ಆಗಲೇ ಅವರಲ್ಲಿಜಾಗೃತಿ ಮನೋಭಾವ ಬೆಳೆಯಲು ಸಾಧ್ಯ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಜನಾಂಗ ಪುಸ್ತಕವನ್ನುಓದುವತ್ತ ಒಲವು ತೋರಬೇಕು, ಆಗಲೇ ಅವರು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿದೆಎಂದುಅಭಿಪ್ರಾಯಪಟ್ಟರು.ಅಲ್ಲದೇ ಸ್ಪಂದನಶೀಲ ಕೃತಿಯುಅತ್ಯುತ್ತಮವಾದ ಬರಹಗಳನ್ನೊಳಗೊಂಡಿದ್ದು ಇದನ್ನು ಪ್ರತಿಯೊಬ್ಬರುಓದಲೇಬೇಕಾದಕೃತಿಯಾಗಿದೆಎಂದುಕೃತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಲೇಖಕ ಮಂಜುನಾಥಚಿತ್ರಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ಸಂಸ್ಕೃತಿಯ ಮಹತ್ವ ಹಿರಿದು ಸಾಹಿತಿ ಸಹೃಯಿಯಾಗಿರಬೇಕೆಂದು, ಹಮ್ಮು ಬಿಮ್ಮುಗಳಿಲ್ಲದೆ ಕನ್ನಡಕಟ್ಟುವಲ್ಲಿ ಮುಂದಾಗಬೇಕು, ಆಯಾ ಕಾಲ ಘಟ್ಟದ ಜ್ಞಾನಿಗಳು ತಮ್ಮಅನುಭವದ ಹೆಪ್ಪನ್ನುತೆಗೆದು ಪುಸ್ತಕದರೂಪದಲ್ಲಿ ಬಿಟ್ಟು ಹೋಗಿರುತ್ತಾರೆ.ಅವುಗಳ ಅಧ್ಯಯನದಿಂದ ಬದುಕು ಹಸನುಗೊಳ್ಳುತ್ತದೆ.ಈ ಹಿನ್ನೆಲೆಯಲ್ಲಿ ಪ್ರಕಾಶನ ಸಂಸ್ಥೆಗಳು ಪ್ರಾಮುಖ್ಯತೆಯನ್ನು ಪಡೆದಿವೆ ಎಂದು ತಿಳಿಸಿದರಲ್ಲದೆ ಪುಸ್ತಕ ಸಂಸ್ಕೃತಿಯ ಮಹತ್ವ ಹಿರಿದು ಸಾಹಿತಿ ಸಹೃಯಿಯಾಗಿರಬೇಕೆಂದು, ಹಮ್ಮು ಬಿಮ್ಮುಗಳಿಲ್ಲದೆ ಕನ್ನಡಕಟ್ಟುವಲ್ಲಿ ಮುಂದಾಗಬೇಕುಎಂದರು.
ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಆಶಯನುಡಿ ಮಾತನಾಡಿದ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಮಾತನಾಡುತ್ತಾ, ವಾಸ್ತವ ಸತ್ಯಾಸತ್ಯೆಗಳನ್ನು ಜನಮನತಲುಪಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆತಲುಪಿಸುವಂತಹಗಟ್ಟಿಯಾದಕಾವ್ಯವನ್ನು ಕವಿಗಳು ಈ ಸಮಾಜಕ್ಕೆಕಟ್ಟಿಕೊಡಬೇಕೆಂದುಕರೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸಾಹಿತಿ ಡಿ.ಎಂ.ಬಡಿಗೇರ “ಕಾವ್ಯಒಂದುಕರ್ಮವಾಗಬೇಕು, ಕವಿಗಳಾದವರಿಗೆ ಅಧ್ಯಯನ, ಅವಲೋಕನ, ಅನುಭವ ಬಹಳ ಮುಖ್ಯ; ಕವಿ ನಶ್ವರ ,ಕವಿತೆಅಮರ.”ಒಂದೇ ಪದ್ಯ ಬರೆದರುಜನ ಮಾನಸದಲ್ಲಿ ಉಳಿಯುವ ಹಾಗೆ ಇರಬೇಕು ಎಂಬ ಕಿವಿ ಮಾತನ್ನು ಹೇಳಿದರು.ಈ ಸಂದರ್ಭದಲ್ಲಿಡಾ. ಶಿವರಾಜ ಗುರಿಕಾರರ, ಶ್ರೀನಿವಾಸ ಚಿತ್ರಗಾರ, ಚನ್ನಬಸವ ಪ್ರಕಾಶನದ ಶರಣಬಸಪ್ಪ ಬಿಳೆಎಲಿ, ಗಂಗಾವತಿಯಉಪನ್ಯಾಸಕ ಶಿವಾನಂದ ಮೇಟಿ, ಮತ್ತಿತರರುತಮ್ಮಅಭಿಪ್ರಾಯ ವ್ಯಕ್ತಪಡಿಸಿದರು,
ಹಿರಿಯ ಸಾಹಿತಿಡಾ.ಮಹಾಂತೇಶ ಮಲ್ಲನಗೌಡರು ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಅಭಿನಂದಿಸಿದರು.ಉಪನ್ಯಾಸಕ ಹಾಗೂ ಸಂಶೋಧಕರಾದ ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಸ್ಪಂದನಶೀಲ ಕೃತಿಒಂದು ವಿಶೇ? ಪ್ರಯೋಗಎಂದರು.ಈ ಕಾರ್ಯಕ್ರಮದಲ್ಲಿ ಮಾಧ್ಯಮಅಕಾಡೆಮಿ ಪ್ರಶಸ್ತಿ ಪುರಸ್ಕೃತಜಿ.ಎಸ್. ಗೋನಾಳ, ಗಂಗಾವತಿಯ ವಿದ್ಯಾನಿಕೇತನಕಾಲೇಜಿನ ಪಿ .ಶರತ್‌ಚಂದ್ರ ಹಾಗೂ ರಾಜ್ಯ ವಿಶೇ? ಪ್ರಶಸ್ತಿ ಪುರಸ್ಕೃತ ಲೇಖಕ ಶಿವನಗೌಡ ಪೊಲೀಸ್ ಪಾಟೀಲರಿಗೆ ‘ಸಾರ್ಥಕ್ಯ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿಮೀಡಿಯಾಕ್ಲಬ್‌ನಅಧ್ಯಕ್ಷಶರಣಪ್ಪ ಬಾಚಲಾಪುರ, ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದರಾಜ್ಯ ಸಮಿತಿ ಸದಸ್ಯರಾದಎಮ್.ಸಾಧಿಕ್ ಅಲಿ, ಬಾಲಕೃ?. ಎಂ ಚಿತ್ರಗಾರ, ಶ್ರೀಮತಿ ಸಾವಿತ್ರಿ ಮುಜುಂದಾರ್, ಉಮೇಶ್ ಬಾಬು ಸುರ್ವೆ, ಭಾಗ್ಯನಗರದ ಪಟ್ಟಣ ಪಂಚಾಯತ್ ಸದಸ್ಯೆ ಶ್ರೀಮತಿ ಜಯಮಾಲಾಕೊಟ್ರೇಶ ಶೆಡ್ಮಿ, ಜೆ.ಸಿ.ಐ ಕ್ಲಬ್ ನ ಶ್ರೀಮತಿ ಶಾರದಾಆರ್ ಪಾನಘಂಟಿ, ಶ್ರೀಮತಿ ಸುವರ್ಣಗಂಟಿ ಮುಂತಾದವರು ಉಪಸ್ಥಿತರಿದ್ದರು.ಕವಿಗೋಷ್ಟಿಯಲ್ಲಿ ಶಾರದಾ .ಎಸ್. ರಜಪೂತ, ಮಹೇಶ ಬಳ್ಳಾರಿ, ಶ್ರೀಮತಿ ಸುಮಿತ್ರಾ. ಬಿ ಚಿತ್ರಗಾರ, ಮೈಲಾರಪ್ಪ ಉಂಕಿ, ವೀರಯ್ಯ ಪೂಜಾರ, ಪ್ರದೀಪ ಹದ್ದಣ್ಣವರ್, ಪು?ಲತಾ ಏಳಬಾವಿ, ನಿಂಗಮ್ಮ ಪಟ್ಟಣಶೆಟ್ಟಿ, ಶಾಂತಪ್ಪ ಪಟ್ಟಣಶೆಟ್ಟಿ, ರಂಗನಾಥಅಕ್ಕಸಾಲಿಗರ, ಗಣೇಶಚಿತ್ರಗಾರ ,ಭೂಮಿಕಅಂಗಡಿ ,ಹನುಮಂತ ಕಡದಳ್ಳಿ ,ಕಲಾವತಿಕುಲಕರ್ಣಿ ,ಶಾಂತಪ್ಪ ಬೆಲ್ಲದ, ಅನ್ನಪೂರ್ಣ ಪದ್ಮಶಾಲಿ ,ಶರಣಬಸಪ್ಪಲಿ ಮುಂತಾದ ಕವಿಗಳು ವೈವಿಧ್ಯಮಯ ಕವನಗಳನ್ನು ವಾಚಿಸಿದರು.
ಶಿಕ್ಷಕರಾದ ವಿನಾಯಕ ನರಗುಂದ ನಿರೂಪಣೆ ನೆರವೇರಿಸಿದರು. ಕು.ವೈದೇಹಿ ,ಕು.ಅಕ್ಷತಾ ಹಾಗೂ ಕು.ಶ್ವೇತಾರಂಜಪಲ್ಲಿ ಪ್ರಾರ್ಥಿಸಿದರು ಸ್ವಾಗತವನ್ನು ಫಕೀರೇಶಎಮ್ಮಿಯರ್ ಮಾಡಿದರು. ಅಶೋಕ ಬಳ್ಳಾರಿ ಇವರು ವಂದಿಸಿದರು.ರಾಘವೇಂದ್ರಜೆ ,ಪ್ರಸನ್ನಕುರಟ್ಟಿ ,ಕೃ?ಕಾಟವಾ, ಅನಿರುದ್ ಪುರೋಹಿತ, ಕಾರ್ತಿಕ ,ಸಂಜೀವಿ ಕೊಳ್ಳಿ, ಅರುಣಚಿನ್ನಾಪುರ, ವಿ?ಚಿತ್ರಗಾರ ಮುಂತಾದವರುಕಾರ್ಯಕ್ರಮವನ್ನು ನಿರ್ವಹಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: