ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಪತ್ರಿಕಾ ದಿನಾಚರಣೆ

ಮಾಧ್ಯಮಗಳಲ್ಲಿ ಪಾಸಿಟಿವ್ ನ್ಯೂಸ್ ಹೆಚ್ಚಾಗಲಿ

Get real time updates directly on you device, subscribe now.

ಕೊಪ್ಪಳ : ಮಾಧ್ಯಮಗಳಲ್ಲಿ ಪಾಸಿಟಿವ್ ನ್ಯೂಸ್ ಪಾಸಿಟಿವ್ ವಿಚಾರ ಕಡಿಮೆ ಆಗುತ್ತಿವೆ. ಇಂಥ ಬದಲಾವಣೆಯ ಕಾರಣದ ಬಗ್ಗೆ ನಾವು ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯೋಗಿನಿ ಅಕ್ಕನವರು ಹೇಳಿದರು.

ಅವರು ರವಿವಾರ ಈಶ್ವರೀಯ ವಿವಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
ಈಗ ಬಹಳ ಜನರಲ್ಲಿ ನೆಗೆಟಿವಿಟಿ ಹೆಚ್ಚಾಗಲು ಕಾರಣ ನೆಗೆಟಿವ್ ನೋಡೋದು, ನೆಗೆಟಿವ್ ಮಾತಾಡೋದು ಅಂಥ ವಿಚಾರ ಕೇಳುವ ರೂಢಿ ಆಗಿದೆ. ಖುಷಿ ಕೊಡುವ ವಿಷಯ ಹೈಲೆಟ್ ಆಗಲಿ. ನೆಗೆಟಿವ್ ವಿಷಯಗಳಿಗೆ ಪ್ರಾಧ್ಯಾನ್ಯತೆ ಕಡಿಮೆ ಆಗಲಿ.
ಈಗ ಈಶ್ವರೀಯ ವಿವಿ ಜನರಲ್ಲಿ ಪಾಸಿಟಿವ್ ವಿಚಾರದ ಮೂಲಕ ಉತ್ತಮ ಸಂಸ್ಕಾರವನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಸಂಸ್ಕಾರ ಶ್ರೇಷ್ಠವಾದಾಗ ಮಾಡುವ ವಿಚಾರ ಆಡುವ ಮಾತು ನೋಡುವ ನೋಟ ಮಾಡುವ ಕರ್ಮ ಎಲ್ಲವೂ ಶ್ರೇಷ್ಠವಾಗುತ್ತೆ. ಮನುಷ್ಯರನ್ನು ಕಾಡುವ ಟೆನ್ಸನ್ ಗೆ ಮೂಲ ಕಾರಣವೂ ನೆಗೆಟಿವ್ ವಿಚಾರಗಳೆ, ಪತ್ರಕರ್ತರು ವೃತ್ತಿ ಒತ್ತಡದಲ್ಲೂ ಸ್ವಲ್ಪ ಸಮಯ ಧ್ಯಾನಕ್ಕೆ ಮೀಸಲಿಡುವಂತೆ ಯೋಗಿನಿ ಅಕ್ಕ ಕೋರಿದರು.
ನಂತರ ಮಾತನಾಡಿದ ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪುರ – ಇವತ್ತಿನ ನವಮಾಧ್ಯಮಗಳು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಪರ್ಯಾಯ ಮಾಧ್ಯಮವಾಗಿದೆ.
ಪಾಸಿಟಿವ್ ಸುದ್ದಿ ಕೊಡಲು ಮಾಧ್ಯಮಗಳು ಸಿದ್ದ. ಆದರೆ ಓದುಗರು ನೋಡುಗರು ಸ್ವೀಕರಿಸಬೇಕು. ಪಾಸಿಟಿವ್ ಸುದ್ದಿಗಳಿಗೆ ಓದುಗರು ಕಡಿಮೆ ಆಗುತ್ತಿದ್ದಾರೆ.
ಒಳ್ಳೆಯ ಸುದ್ದಿ ಓದುಗರು ನೋಡುಗರು ಬಯಸಿದರೆ ಸುಧಾರಣೆ ಸಾಧ್ಯವಿದೆ. ಆತ್ಮಸಾಕ್ಷಿಯ ವಿರುದ್ಧ ಕೆಲಸ ಮಾಡದಿರುವುದೂ ಕೂಡ ಆಧ್ಯಾತ್ಮ ಎಂದು ಅವರು ಹೇಳಿದರು.
 ಹಿರಿಯ ಪತ್ರಕರ್ತರಾದ ಸಾಧಿಕ್ ಅಲಿ ಮಾತನಾಡುತ್ತಾ ವರ್ತಮಾನ ಸಮಯದಲ್ಲಿ ಪ್ರತಿಯೊಬ್ಬ ಮನುಷ್ಯ ಒತ್ತಡದ ಬದುಕನ್ನು ನಡೆಸುತ್ತಿದ್ದಾನೆ ಈ ಮಾನಸಿಕ ಒತ್ತಡದಿಂದ ಮುಕ್ತರಾಗಲು ಧ್ಯಾನ ಅವಶ್ಯಕ ಎಂದರು. ನಿಜವಾದ ಸುಖ, ಶಾಂತಿ, ನೆಮ್ಮದಿ ಆಧ್ಯಾತ್ಮ ಮಾರ್ಗದಿಂದ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಎಲ್ಲಾ ಪತ್ರಿಕಾ ಹಾಗೂ ಟಿವಿ ಮಾದ್ಯಮದವರಿಗೆ, ಈಶ್ವರೀಯ ಸನ್ಮಾನ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!