ಎಐಡಿಎಸ್‌ಒ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ
“ಗಂಗಾವತಿಯಲ್ಲಿ ಕನಕಗಿರಿಯ ಬಂಕಾಪುರ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಳೆದ ಜೂನ್ 26 ರಂದು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹೋರಾಟದ ಪ್ರತಿಫಲವಾಗಿ, ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿದ ಮಾನ್ಯ ಡಿಪೋ ಮುಖ್ಯಸ್ಥರು ಇಂದು ಬೆಳಿಗ್ಗೆ 8:00 ಕ್ಕೆ ಕನಕಗಿರಿ ಯಿಂದ ಬಂಕಾಪುರ ಮಾರ್ಗವಾಗಿ ಗಡ್ಡಿ ಉಡುಮ್ಮಲ್ ಆರಳ ವಡ್ರಟ್ಟಿ ಮಾರ್ಗವಾಗಿ ಗಂಗಾವತಿಗೆ,ಮಧ್ಯಾಹ್ನ 2: 00 ಕ್ಕೆ ಕನಕಗಿರಿ ಯಿಂದ ಮತ್ತು ಗಂಗಾವತಿಗೆ ಮತ್ತು ಸಾಯಂಕಾಲ 4:30 ಕ್ಕೆ ಗಂಗಾವತಿಯಿಂದ ಕನಕಗಿರಿಗೆ ಬಸ್ ಸೌಕರ್ಯ ಕಲ್ಪಿಸಿದ್ದಾರೆ, ಇಂದು ತಮ್ಮ ಊರಿಗೆ ಬಸ್ ಬಂದಿರುವುದನ್ನು ಎಲ್ಲಾ ಊರಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೋರಾಟಕ್ಕೆ ಸಂದ ಜಯ ವೆಂದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಎಐಡಿಎಸ್ಓ ಪರವಾಗಿ ಹೋರಾಟದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೆಯೇ ಹೋರಾಟಕ್ಕೆ ಸ್ಪಂದಿಸಿದ ಡಿಪೋ ಮುಖ್ಯಸ್ಥರಿಗೂ ಧನ್ಯವಾದಗಳನ್ನು ತಿಳಿಸಿದರು
Comments are closed.