ಬೀಕರ ಅಗ್ನಿ ದುರಂತ : ಅಂಗಡಿಗಳು ಭಸ್ಮ
ಕೊಪ್ಪಳ ನಗರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು ಸಾಲು ಸಾಲು ಅಂಗಡಿಗಳು ಬೆಂಕಿಗೆ ಕೆನ್ನಾಲಿಗೆಗೆ ತುತ್ತಾಗಿವೆ.
ಕೊಪ್ಪಳದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮೇಘರಾಜ್ ಎನ್ನುವವರ ಪ್ಲೇವುಡ್ ಹಾಗೂ ಪೇಂಟ್ ಅಂಗಡಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು ಮಧ್ಯಾಹ್ನ 3:00 ಸುಮಾರಿಗೆ ಬೆಂಕಿ ಆವರಿಸಿಕೊಂಡಿತು.
ನಂತರ ಒಂದಾದ ನಂತರ ಒಂದು ಅಂಗಡಿಯನ್ನು ವ್ಯಾಪಿಸುತ್ತಾ ಹೋದ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ವ್ಯಾಪಿಸಿ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವುದಕ್ಕಾಗಿ ಸಾಕಷ್ಟು ಪರೀಕ್ಷೆ ಪಡುತ್ತಿದ್ದಾರೆ ಅದರ ಜೊತೆಗೆ ಭೀಕರ ಬೆಂಕಿಯ ದುರಂತವನ್ನು ನೋಡಲು ಜಮಾಯಿಸಿರುವ ಜನರನ್ನು ನಿಯಂತ್ರಿಸುವುದು ಸಹ ಕಷ್ಟದಾಯಕ ಎನ್ನುವಂತಾಗಿದೆ.
Comments are closed.