ಮೇ.21, 22ರಂದು ಜಿಪಿಎಸ್ ಅಳವಡಿಸುವ ವಿಶೇಷ ಅಭಿಯಾನ

Get real time updates directly on you device, subscribe now.

: ವಸತಿ ಯೋಜನೆಯ ಮನೆಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಜಿ.ಪಿ.ಎಸ್ ಅಳವಡಿಸುವ ಕುರಿತಂತೆ ಮೇ 21 ಮತ್ತು ಮೇ 22ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ವಿವಿಧ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಹಾಗೂ ಅಪೂರ್ಣಗೊಂಡ ಮನೆಗಳ ಪ್ರತಿಯೊಬ್ಬ ಫಲಾನುಭವಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೋಟಿಸ್ ಜಾರಿ ಮಾಡಿ ಮನೆಗಳನ್ನು ಪೂರ್ಣಗೊಳಿಸಲು ಆಯಾ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಗಂಗಾವತಿ ತಾಲ್ಲೂಕಿನಲ್ಲಿ ಪ್ರಾರಂಭಿಸದೇ ಇರುವ 607 ಮನೆಗಳು, 476 ತಳಪಾಯ ಹಂತದಲ್ಲಿ, ಲಿಂಟಲ್ ಹಂತದಲ್ಲಿ 469, ಛಾವಣಿ ಹಂತದಲ್ಲಿ 449, ಕುಕನೂರು ತಾಲ್ಲೂಕಿನಲ್ಲಿ ಪ್ರಾರಂಭಿಸದೇ ಇರುವ 1252 ಮನೆಗಳು, 830 ತಳಪಾಯ ಹಂತದಲ್ಲಿ, ಲಿಂಟಲ್ ಹಂತದಲ್ಲಿ 637, ಛಾವಣಿ ಹಂತದಲ್ಲಿ 292, ಯಲಬುರ್ಗಾ ತಾಲ್ಲೂಕಿನಲ್ಲಿ ಪ್ರಾರಂಭಿಸದೇ ಇರುವ 1365 ಮನೆಗಳು, 1167 ತಳಪಾಯ ಹಂತದಲ್ಲಿ, ಲಿಂಟಲ್ ಹಂತದಲ್ಲಿ 885, ಛಾವಣಿ ಹಂತದಲ್ಲಿ 404, ಕನಕಗಿರಿ ತಾಲ್ಲೂಕಿನಲ್ಲಿ ಪ್ರಾರಂಭಿಸದೇ ಇರುವ 400 ಮನೆಗಳು, 294 ತಳಪಾಯ ಹಂತದಲ್ಲಿ, ಲಿಂಟಲ್ ಹಂತದಲ್ಲಿ 204, ಛಾವಣಿ ಹಂತದಲ್ಲಿ 112, ಕಾರಟಗಿ ತಾಲ್ಲೂಕಿನಲ್ಲಿ ಪ್ರಾರಂಭಿಸದೇ ಇರುವ 655 ಮನೆಗಳು, 550 ತಳಪಾಯ ಹಂತದಲ್ಲಿ, ಲಿಂಟಲ್ ಹಂತದಲ್ಲಿ 370, ಛಾವಣಿ ಹಂತದಲ್ಲಿ 191, ಕುಷ್ಟಗಿ ತಾಲ್ಲೂಕಿನಲ್ಲಿ ಪ್ರಾರಂಭಿಸದೇ ಇರುವ 659 ಮನೆಗಳು, 939 ತಳಪಾಯ ಹಂತದಲ್ಲಿ, ಲಿಂಟಲ್ ಹಂತದಲ್ಲಿ 678, ಛಾವಣಿ ಹಂತದಲ್ಲಿ 291, ಕೊಪ್ಪಳ ತಾಲ್ಲೂಕಿನಲ್ಲಿ ಪ್ರಾರಂಭಿಸದೇ ಇರುವ 594 ಮನೆಗಳು, 868 ತಳಪಾಯ ಹಂತದಲ್ಲಿ, ಲಿಂಟಲ್ ಹಂತದಲ್ಲಿ 763, ಛಾವಣಿ ಹಂತದಲ್ಲಿ 644 ಸೇರಿದಂತೆ ಜಿಲ್ಲೆಯಾದ್ಯಂತ ಇನ್ನೂ ಪ್ರಾರಂಭಿಸದೇ ಇರುವ ಮನೆಗಳು 5532, ತಳಪಾಯ ಹಂತದಲ್ಲಿರುವ 5124, ಲಿಂಟಲ್ ಹಂತದಲ್ಲಿರುವ 4006 ಹಾಗೂ ಛಾವಣಿ ಹಂತದ 2383 ಮನೆಗಳು ಪ್ರಗತಿಯಲ್ಲಿವೆ.
ಜಿಲ್ಲೆಯ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಪ್ರಗತಿಯಲ್ಲಿರುವ ಮನೆಗಳನ್ನು (ಛಾವಣಿ ಮತ್ತು ರೂಫ್) ಹಾಗೂ 2021-22ನೇ ಸಾಲಿನ ಪ್ರಾರಂಭಿಸದೇ ಇರುವ ಮನೆಗಳನ್ನು ಪ್ರಾರಂಭಿಸಿ ಮೇ. 21 ಮತ್ತು ಮೇ 22ರಂದು ಬೆಳಿಗ್ಗೆ 08 ಗಂಟೆಯಿAದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಖುದ್ದಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಪಿಎಸ್ ಮುಖಾಂತರ ಮನೆಗಳನ್ನು ಅಳವಡಿಸಲು ಕ್ರಮ ವಹಿಸಿ ಹಾಗೂ 2021-22ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರಾರಂಭಿಸದೇ ಇರುವ ಮನೆಗಳನ್ನು ಕೂಡಲೇ ಪ್ರಾರಂಭಿಸಿ ಪ್ರಗತಿ ಸಾಧಿಸುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: