ಜಾಗತಿಕ ಲಿಂಗಾಯತ ಮಹಾಸಭಾ,ಲಿಂಗಾಯತ ಸಮಾವೇಶ ಯಶಸ್ವಿಗೊಳಿಸಲು ಒಕ್ಕೊರಲ ನಿರ್ಧಾರ
ಕೊಪ್ಪಳ : ಬರುವ ಜೂನ್ ೧೬ ರಂದು ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶವನ್ನು ಎಲ್ಲ ಲಿಂಗಾಯತರು ಸೇರಿ ಯಶಸ್ವಿಗೊಳಿಸಲು ತಾಲೂಕಾ ಕ್ರೀಡಾಂಗಣದ ವೇದಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.
ಪ್ರಾಸ್ತಾವಿಕವಾಗಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶದ ಅವಶ್ಯಕತೆ ಮತ್ತು ಭವಿಷ್ಯದ ಮೀಸಲಾತಿಯ ಸೌಲಭ್ಯಗಳ ಕುರಿತಾಗಿ ಚರ್ಚಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಗವಿಸಿದ್ಧಪ್ಪ ಕೊಪ್ಪಳ, ಬಸವ ಸಮಿತಿಯ ಬಸವರಾಜ ಬಳ್ಳೊಳ್ಳಿ, ಮುಖಂಡರಾದ ಸೋಮನಗೌಡ ಪಾಟೀಲ, ಶರಣಪ್ಪ ಹ್ಯಾಟಿ, ವಿರೂಪಾಕ್ಷಪ್ಪ ಮುರಳಿ ಮೊದಲಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶಿವುಕುಮಾರ ಕುಕನೂರು, ದ್ಯಾಮಣ್ಣ ಹಡಪದ, ಸಿದ್ಧಪ್ಪ ಹಂಚಿನಾಳ, ಗಾಳೆಪ್ಪ ಕಡೆಮನಿ, ಗಂಗಾವತಿಯ ಸಿದ್ಧಣ್ಣ ಜಕ್ಕಲಿ, ಕೃಷ್ಣಪ್ಪ ಕಟ್ಟಿಮನಿ, ಕಿಶೋರಿ ಭೂದನೂರ, ಅಪರ್ಣ ಬಳ್ಳೊಳ್ಳಿ, ಕದಳಿ ವೇದಿಕೆಯ ನಿರ್ಮಲಾ ಬಳ್ಳೊಳ್ಳಿ, ಡಾ. ಸಂಗಮೇಶ ಕಲಹಾಳ, ಛತ್ರಪ್ಪ ಮಡಿವಾಳರ, ಅರ್ಚನಾ ಸಸಿಮಠ, ಯಲ್ಲಪ್ಪ ಕೆ. ಮೇಟಿ, ಬಸವರಾಜ ಕಲ್ಮಂಗಿ, ಎ.ಕೆ. ಮಹೇಶ, ರಾಜಮ್ಮ ಕಾತರಕಿ, ದಾನಪ್ಪ ಶೆಟ್ಟರ್, ಶರಣಬಸನಗೌಡ, ಶೇಖರ ಇಂಗಳದಾಳ, ಗುಡದಪ್ಪ ಹಡಪದ, ರಾಜೇಶ ಸಸಿಮಠ, ಎಂ. ಬಸವರಾಜಪ್ಪ, ರಾಚಪ್ಪ ಮುಂಡರಗಿ, ಸೌಮ್ಯ ನಾಲವಾಡ, ಸಂಗಪ್ಪ ವಣಿಗೇರಿ, ದೇವೀಶ ಗಬ್ಬೂರ, ಅನ್ನಪೂರ್ಣ ಮನ್ನಾಪುರ, ಮಂಜುಳಾ ಹುರಕಡ್ಲಿ, ಸೇರಿದಂತೆ ನೂರಾರು ಸಂಖ್ಯೆಯ ಲಿಂಗಾಯತ ಬಾಂಧವರು ಸಭೆಯಲ್ಲಿ ಭಾಗವಹಿಸಿದ್ದರು.
ಜೂನ್ ೧೬ ಮುಂಜಾನೆ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿ ನಡೆಯಲಿದ್ದು, ಸಂಜೆ ೫ ಗಂಟೆಗೆ ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ (ರಿ) ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್.ಎಂ. ಜಾಮದಾರ, ಚಿಂತಕರಾದ ಕಲಬುರ್ಗಿಯ ಮೀನಾಕ್ಷಿ ಬಾಳಿ, ಬಸವ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಅರವಿಂದ ಜತ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಲಿಂಗಾಯತ ಜಾಗೃತಿ ಕುರಿತು ಮಾತನಾಡುವರು. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ನಾಗರಾಜ ಅರಳಿ ಸಮಾವೇಶದ ಅಧ್ಯಕ್ಷತೆಯನ್ನು ಮತ್ತು ಸಾನಿಧ್ಯವನ್ನು ಸಂಡೂರಿನ ವಿರಕ್ತ ಮಠದ ಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮಾವೇಶದ ಯಶಸ್ಸಿಗೆ ಅವಶ್ಯಕವಾದ ಎಲ್ಲ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುವ ಮತ್ತು ಸಮಾವೇಶದ ಜಾಗೃತಿಯನ್ನು ಮನೆಮನೆಗೆ ತಲುಪಿಸುವ ನಿರ್ಧಾರ ಮಾಡಲಾಯಿತು.
Comments are closed.