ಗಂಗಾವತಿ ನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್ ಆರಂಭಿಸಲು ಟೆಂಡರ್ ಆಹ್ವಾನ

Get real time updates directly on you device, subscribe now.

  ಗಂಗಾವತಿ ನ್ಯಾಯಾಲಯ ಆವರಣದಲ್ಲಿರುವ 17’್ಠ12’ ಅಡಿ  ವಿಸ್ತೀರ್ಣವುಳ್ಳ ಖಾಲಿ ಜಾಗೆಯಲ್ಲಿ ಉಪಹಾರಗೃಹವನ್ನು ನಡೆಸುವ ಉದ್ದೇಶಕ್ಕಾಗಿ ಷರತ್ತು ಹಾಗೂ ನಿಬಂಧನೆಗಳಿಗೆ ಒಳಪಟ್ಟು ಗುತ್ತಿಗೆ/ಲೈಸನ್ಸ್ ಆಧಾರದ ಮೇಲೆ ಕೊಡುವುದಿದ್ದು, ಆಸಕ್ತ ಅರ್ಜಿದಾರರಿಂದ ಮೊಹರಾದ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ಟೆಂಡರ್ ನಮೂನೆ ಹಾಗೂ ಇತರೆ ವಿವರಗಳು ಕೊಪ್ಪಳ ಜಿಲ್ಲಾ ನ್ಯಾಯಾಲಯದ ಕಛೇರಿಯಲ್ಲಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳ(ಗಂಗಾವತಿ ಪೀಠ) ಇವರ ಕಚೇರಿಯಲ್ಲಿ ಹಾಗೂ ವೆಬ್‌ಸೈಟ್:    https://districts.ecourts.gov.in/koppal     ನಲ್ಲಿ ಲಭ್ಯವಿರುತ್ತದೆ.  ನಿಗದಿತ ಟೆಂಡರ್ ನಮೂನೆ (ಅನುಬಂಧ-1) ಯನ್ನು ಭರ್ತಿಮಾಡಿ ಜೂನ್ 14 ರ ಸಂಜೆ 5.00 ಗಂಟೆಯ ಒಳಗಾಗಿ ಮೊಹರಾದ ಲಕೋಟೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರ ಕಛೇರಿಗೆ ಸಲ್ಲಿಸಬೇಕು.
ನಿಗದಿತ ಜಾಗೆಯಲ್ಲಿ ತಮ್ಮ ಖರ್ಚಿನಲ್ಲಿಯೇ ತಾತ್ಕಾಲಿಕ ಶೆಡ್ ಹಾಕಿಕೊಂಡು ಉಪಹಾರ ಗೃಹ ನಡೆಸಬೇಕು. ಶೆಡ್‌ಗೆ ಬೇಕಾಗುವ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯನ್ನು ಸಹ ಟೆಂಡರ್‌ದಾರರೇ ಮಾಡಿಕೊಳ್ಳಬೇಕು. ಈ ಹಿಂದಿನ ಟೆಂಡರ್‌ಗಳಲ್ಲಿ ಅಂಗೀಕೃತವಾದ ವಾರ್ಷಿಕ  ಕನಿಷ್ಟ ಬಾಡಿಗೆ ದರ ರೂ. 23,181/- ಅಥವಾ ಮೇಲ್ಪಟ್ಟು, ಅತೀ ಹೆಚ್ಚು ಬಾಡಿಗೆ ಪ್ರಸ್ತ್ತಾವನೆ ಸಲ್ಲಿಸುವ ಟೆಂಡರ್‌ದಾರರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು.
ಆಸಕ್ತ ಅರ್ಜಿದಾರರು ಟೆಂಡರ್ ದಸ್ತಾವೇಜಿನೊಂದಿಗೆ 10,000/- ರೂಪಾಯಿಗಳ  ಇ.ಎಂ.ಡಿ ಮೊಬಲಗನ್ನು  Prl. District and Sessions Judge, Koppal     ಇವರ ಹೆಸರಿನಲ್ಲಿ ತೆಗೆದ ರಾಷ್ಟಿçÃಕೃತ ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸಲ್ಲಿಸತಕ್ಕದ್ದು. ಇಎಂಡಿ ರಹಿತ ಟೆಂಡರ್ ದಸ್ತಾವೇಜುಗಳನ್ನು ಟೆಂಡರ್ ಪ್ರಕ್ರಿಯೆಗಾಗಿ ಪರಿಗಣಿಸಲಾಗುವುದಿಲ್ಲ.  ಇಎಂಡಿ ಮೊಬಲಗನ್ನು ಟೆಂಡರ್ ಪ್ರಕ್ರಿಯೆಯು ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಹಿಂದಿರುಗಿಸಲಾಗುವುದು.
ಗುತ್ತಿಗೆ ಪಡೆಯುವ ಅರ್ಜಿದಾರರ ಇತ್ತೀಚಿನ ಎರಡು ಭಾವಚಿತ್ರಗಳನ್ನು, ಗುರುತುಪತ್ರ ಮತ್ತು  ವಿಳಾಸದ ದಾಖಲೆಯನ್ನು ಹಾಜರುಪಡಿಸಬೇಕು. ಇದೇ ರೀತಿ ಉಪಹಾರಗೃಹದಲ್ಲಿ  ಕೆಲಸ ಮಾಡುವ ಕೆಲಸಗಾರರ ಗುರುತುಪತ್ರ ಹಾಗೂ ವಿಳಾಸದ ದಾಖಲೆಯನ್ನು ಕೂಡಾ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳ (ಗಂಗಾವತಿ ಪೀಠ) ಇವರ ಕಛೇರಿಯಲ್ಲಿ ಹಾಜರುಪಡಿಸಬೇಕು. ಗುತ್ತಿಗೆದಾರರು ತಮ್ಮ ಪರವಾನಿಗೆ ಪತ್ರ (ಲೈಸನ್ಸ್) ವನ್ನು ಕೇಳಿದಾಗ ತೋರಿಸಬೇಕು. ಲೈಸನ್ಸ್ ಪಡೆದ ಗುತ್ತಿಗೆದಾರರು ಮಾತ್ರ ಈ ಉದ್ಯಮವನ್ನು ನಡೆಸಲು ಅರ್ಹರಾಗಿರುತ್ತಾರೆ.
ಆಸಕ್ತ ಅರ್ಜಿದಾರರು ಎಲ್ಲಾ ನಿಬಂಧನೆಗಳಿಗೆ ಒಳಪಟ್ಟು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರಿಗೆ ಟೆಂಡರ್ ಪ್ರಸ್ತಾವನೆಯನ್ನು ಮೊಹರಾದ ಲಕೋಟೆಯಲ್ಲಿ ಅನುಬಂಧ-1 ಹಾಗೂ 2 ರಲ್ಲಿ ದಿನಾಂಕಃ 14.06.2024 ರಂದು ಸಂಜೆ 5.00 ಗಂಟೆಗೆ ಒಳಗಾಗಿ ಸಲ್ಲಿಸಬೇಕು.  ಲಕೋಟೆಯ ಮೇಲೆ   Tender for Running Hotel/Canteen at Gangavathi     ಎಂದು ಸ್ಪಷ್ಟವಾಗಿ ನಮೂದಿಸಬೇಕು.
ಮೊಹರಾದ ಟೆಂಡರ್ ಗಳನ್ನು ದಿನಾಂಕಃ 14.06.2024 ರಂದು ಸಂಜೆ 5.30 ಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರ ಚೇಂಬರನಲ್ಲಿ ಹಾಜರಿರುವ ಟೆಂಡರ್‌ದಾರರ ಸಮಕ್ಷಮದಲ್ಲಿ ತೆರೆಯಲಾಗುವುದು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಯಾವುದೇ ಕಾರಣವನ್ನು ನೀಡದೇ  ಟೆಂಡರ್ ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಾಗೂ ಟೆಂಡರ್ ಪ್ರಕ್ರಿಯೆಯನ್ನು ರದ್ದು ಪಡಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಈ ಟೆಂಡರ್ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಲಸದ ವೇಳೆಯಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಯವರನ್ನು  ಸಂಪರ್ಕಿಸಿ ಪಡೆಯಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!