ಸಂವಿಧಾನದ ಆಶಯಗಳ ರಕ್ಷಣೆಗಾಗಿ ಎಲ್ಲರೂ ಬನ್ನಿ- ಅಲ್ಲಮಪ್ರಭು ಬೆಟ್ಟದೂರ 

Get real time updates directly on you device, subscribe now.

ಕೊಪ್ಪಳ : ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ದೇಶಕ್ಕಾಗಿ ರೂಪಿಸಿದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ದಕ್ಕೆ ಎದುರಾಗಿದ್ದು ಅವುಗಳ ರಕ್ಷಣೆಗಾಗಿ  ಇಡೀ ನಾಡಿನ ಪ್ರಗತಿಪರರೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಆ ಪ್ರಯತ್ನದ ಭಾಗವಾಗಿ ಕೊಪ್ಪಳದಲ್ಲಿ ಹತ್ತನೇ  ಮೇ ಸಾಹಿತ್ಯ ಮೇಳ ನಡೆಯುತ್ತಿದ್ದು ಅದೊಂದು ಕೊಪ್ಪಳದಲ್ಲಿ ದೇಶದ ಅರಿವಿನ ಮಹಾ ಸ್ಪೋಟವಾಗಿದ್ದು ಅಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯೋಗೋಣ ಬನ್ನಿ ಎಂದು  ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕರೆ ನೀಡಿದರು.
ಅವರು ಕೊಪ್ಪಳದಲ್ಲಿ ೨೫ ಮತ್ತು ೨೬ ಎರಡು ದಿನಗಳ ಕಾಲ ನಡೆವ ೧೦ ಮೇ ಸಾಹಿತ್ಯ ಮೇಳದ ಕರಪತ್ರ ಹಾಗೂ ಆಮಂತ್ರಣ ಪತ್ರಿಕೆಯನ್ನು ವಿಶಿಷ್ಟವಾಗಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ನಗರದ ಅಶೋಕ ವೃತ್ತದ ಬಳಿ ಇರುವ ಸಾಹಿತ್ಯ ಭವನದ ಹೊರ ಆವಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ಡಾ.ವಿ.ಬಿ.ರಡ್ಡೇರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಸರ್ವಾಧಿಕಾರದ ವಿರುದ್ದ ಎಲ್ಲರೂ ಹೋರಾಡಬೇಕಾಗಿದೆ. ಸರ್ವಾಧಿಕಾರದ ಶಕ್ತಿಗಳನ್ನು ಸಾಮಾನ್ಯ ಜನ ನಿಲ್ಲಬೇಕಿದೆ. ಸರ್ವಾಧಿಕಾರದ ವಿರುದ್ಧ ಹೋರಾಡುವ ಮೂಲಕ ನಮಗೆ ದಕ್ಕಿರುವ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಿದೆ. ಮೇ ಸಾಹಿತ್ಯ ಮೇಳ ಈ ನೆಲೆಯಲ್ಲಿ ಕೆಲಸ ಮಾಡುತ್ತಿದೆ.
 ಇಂದು ಜರೂರಾಗಿ ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ . ಈ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳ ಎಲ್ಲರ ಧ್ವನಿಯಾಗಲಿದೆ ಎಂದು ಡಾ. ವಿ.ಬಿ.ರಡ್ಡೇರ್ ಹೇಳಿದರು.
 ಶರಣಪ್ಪ ಬಾಚಲಾಪೂರ ಹಾಗೂ ಪ್ರಕಾಶ ಕಂದಕೂರ, ಮಹಾಂತೇಶ ಮಲ್ಲನಗೌಡರ ಕರಪತ್ರಗಳನ್ನು ಬಿಡುಗಡೆ ಮಾಡಿದರು.
 ಪ್ರಾಸ್ತಾವಿಕವಾಗಿ ಬಸವರಾಜ್ ಶೀಲವಂತರ್ ಮಾತಾಡಿದರು ಡಿ.ಎಂ. ಬಡಿಗೇರ ಅವರು ಮೇ ಸಾಹಿತ್ಯ ಮೇಳದ ಆಶಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕಾಸಿಂಸಾಬ ಸರ್ದಾರ್, ಗಾಳೆಪ್ಪ ಮುಂಗೋಲಿ, ಎಸ್.ಎ.ಗಫಾರ್,
ರುದ್ರಪ್ಪ ಭಂಡಾರಿ, ಶರಣು ಶೆಟ್ಟರ್, ಲಕ್ಷ್ಮಣ ಪೀರಗಾರ, ಎಂ.ಕೆ.ಸಾಹೇಬ್, ಕಾಶಪ್ಪ ಚಲವಾದಿ ಮಹಾಂತೇಶ ನೆಲಗಾವಿ, ಸಂಜಯದಾಸ ಕೌಜಗೇರಿ,
ಬಸವರಾಜ್ ಸೂಳಿಬಾವಿ, ಎಚ್.ವಿ.ರಾಜಾಬಕ್ಷಿ, ಸಿರಾಜ್ ಬಿಸರಳ್ಳಿ, ಕಾಶಪ್ಪ ಚಲವಾದಿ,  ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: