ಕಕಾನಿ ಪತ್ರಕರ್ತರ ಸಂಘದ ಕುಷ್ಟಗಿ ಅಧ್ಯಕ್ಷರಾಗಿ ವೆಂಕಟೇಶ ಕುಲಕರ್ಣಿ ನೇಮಕ
‘ಸಮರ್ಥವಾಣಿ’ ವರದಿಗಾರ ವೆಂಕಟೇಶ ಕುಲಕರ್ಣಿ ನೇಮಕ
ಕುಷ್ಟಗಿ.ಮೇ.14: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಷ್ಟಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಸಮರ್ಥವಾಣಿ ಪತ್ರಿಕೆ ವರದಿಗಾರ ವೆಂಕಟೇಶ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ.
ಮಂಗಳವಾರ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ವೆಂಕಟೇಶ ಕುಲಕರ್ಣಿ ಅವರಿಗೆ ಆದೇಶ ಪತ್ರ ನೀಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ, ಜಿಲ್ಲಾ ಕಾರ್ಯದರ್ಶಿ ವೈ.ನಾಗರಾಜ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎಂ.ಸಾದೀಕ್ ಅಲಿ, ಹರೀಶ್ ಹೆಚ್.ಎಸ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಮೊದಲು ಕುಷ್ಟಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಅನಿಲ್ ಅಲಮೇಲ ಅವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅನಿಲ್ ಅಲಮೇಲ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸಮರ್ಥವಾಣಿ ಪತ್ರಿಕೆಯ ವರದಿಗಾರ ವೆಂಕಟೇಶ ಕುಲಕರ್ಣಿ ಅವರನ್ನು ಕುಷ್ಟಗಿ ತಾಲೂಕು ಕಾರ್ಯನಿರತ ಪತ್ರಕರ್ತಕರ ಸಂಘದ ಸರ್ವ ಪದಾಧಿಕಾರಿಗಳ ಶಿಪಾರಸ್ಸಿನ ಮೇರೆಗೆ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಧ್ಯಕ್ಷರನ್ನು ಹೊರತುಪಡಿಸಿ ತಾಲೂಕು ಘಟಕದ ಇನ್ನಿತರ ಪದಾಧಿಕಾರಿಗಳು ಯತಾವತ್ತಾಗಿ ಮುಂದುವರೆದಿದ್ದಾರೆ ಎಂದು ಜಿಲ್ಲಾ ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.
Comments are closed.