SSLC ಫಲಿತಾಂಶ 32ನೇ ಸ್ಥಾನಕ್ಕೆ ಕುಸಿದ ಕೊಪ್ಪಳ
ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟವಾಗಿದ್ದು ಕೊಪ್ಪಳ ಜಿಲ್ಲೆ 32ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಲದ ಫಲಿತಾಂಶ ಕೊಪ್ಪಳ ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಾಕ್ ನೀಡುವಂತಿದೆ ಎಂದೇ ಹೇಳಬಹುದು. ಕೊನೆಯ ಐದರಿಂದ ಆರು ಸ್ಥಾನಗಳು ಕಲ್ಯಾಣ ಕರ್ನಾಟಕ ಜಿಲ್ಲೆಯ ದಾಗಿವೆ. ಅದರಲ್ಲೂ ಕೊಪ್ಪಳ ಜಿಲ್ಲೆ ಕಳೆದ ಸಲ 90% ಇದ್ದದ್ದು ಈ ಸಲ ಕೇವಲ 61% ಮಾತ್ರ ಉತ್ತೀರ್ಣರಾಗಿದ್ದಾರೆ . ಕಳೆದ ಸಲಕ್ಕೆ ಹೋಲಿಸಿದರೆ 29% ರಿಸಲ್ಟ್ ಕಡಿಮೆಯಾಗಿದೆ. ಈ ಸಲದ ಪರೀಕ್ಷಾ ಪಲಿತಾಂಶ ಕೊಪ್ಪಳ ಜಿಲ್ಲೆಯ ಪಾಲಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸಾಕಷ್ಟು ನಿರಾಸೆಯನ್ನು ಉಂಟುಮಾಡಿದೆ.
Comments are closed.