ವಿಶ್ವ ರೆಡ್ ಕ್ರಾಸ್ ದಿನ ಹಾಗೂ ಅಂತರರಾಷ್ಟ್ರೀಯ ಥಲಸ್ಸೇಮಿಯಾ ದಿನ
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳದಲ್ಲಿ ರೆಡ್ ಕ್ರಾಸ್ ಸಂಸ್ಥಾಪಕರಾದ ಜೀನ್ ಹೆನ್ರಿ ಡ್ಯೂನಾಂಟ್ ರವರ ಜನ್ಮದಿನಾಚರಣೆಯ ಅಂಗವಾಗಿ “ವಿಶ್ವ ರೆಡ್ ಕ್ರಾಸ್ ದಿನ” ಹಾಗೂ “ಅಂತರರಾಷ್ಟ್ರೀಯ ಥಲಸ್ಸೇಮಿಯಾ ದಿನ” ವನ್ನು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳ, ರೋಗನಿದಾನ ಶಾಸ್ತ್ರ ವಿಭಾಗ ಕಿಮ್ಸ್ ಕೊಪ್ಪಳ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ರವರ ಭಾವಚಿತ್ರಕ್ಕೆ ಥಲಸ್ಸೇಮಿಯಾದಿಂದ ಬಳಲುತ್ತಿರುವ ರೋಗಿ ಕುಮಾರ ಸಿದ್ದಾರ್ಥ ಹಾಗೂ ಅತಿಥಿಗಳಿಂದ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರವನ್ನು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಡಾ|| ಮಂಜುನಾಥ ಸಜ್ಜನರವರು “ವಿಶ್ವ ರೆಡ್ ಕ್ರಾಸ್ ದಿನದ” ಈ ವರ್ಷದ ಘೋಷ್ಯವಾಕ್ಯವಾದ Keeping Humanity Alive (ಮಾನವೀಯತೆಯನ್ನು ಜೀವಂತವಾಗಿರುಸುವುದು) ಕುರಿತು ಮಾತನಾಡಿದರು. ಹಾಗೆಯ ಥಲಸ್ಸೇಮಿಯಾ ರೋಗಿಗಳಿಗೆ ಪ್ರತಿ ತಿಂಗಳು ರಕ್ತದ ಅವಶ್ಯಕತೆ ಇರುವದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಎಂದು ರಕ್ತದಾನಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಮ್ಸ್‌ನ ರೋಗನಿದಾನ ಶಾಸ್ತ್ರವಿಭಾಗದ ಮುಖ್ಯಸ್ಥರಾದ ಡಾ||ಅನಿರುದ್ಧ ವಿ. ಕುಷ್ಟಗಿ ರವರು ಮುಖ್ಯ ಅತಿಥಿಗಳಾಗಿ ಸಹಪ್ರಾಧ್ಯಾಪಕರಾದ ಡಾ||ವಿನಯ, ಸಹಾಯಕ ಪ್ರಾಧ್ಯಾಪಕರಾದ ಡಾ||ಹೇಮಾವತಿ , ಡಾ||ಧನ್ಯ ಕೆ. ಹಾಗೂ ವೈದ್ಯವಿದ್ಯಾರ್ಥಿಗಳು ಮತ್ತು ಬಿ.ಎಸ್.ಸಿ. ವಿದ್ಯಾರ್ಥಿಗಳು, ಸಿಬ್ಬಂದಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮಾನವೀಯತೆಯನ್ನು ಜೀವಂತವಾಗಿರಿಸಲು ಕೈಜೋಡಿಸಿದರು.
Comments are closed.