ಲೋಕಸಭಾ ಚುನಾವಣೆ: ಬೃಹತ್ ಬೈಕ್ ರ‍್ಯಾಲಿ ಮೂಲಕ ಮತದಾನ ಜಾಗೃತಿ

Get real time updates directly on you device, subscribe now.

ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾರಿಗೆ ಮತದಾನದ ಜಾಗೃತಿಗಾಗಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಶನಿವಾರ ಕೊಪ್ಪಳ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ಬೈಕ್ ರ‍್ಯಾಲಿಗೆ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೆಯ ಅವರು ಚಾಲನೆ ನೀಡಿದರು.
*ಬೃಹತ್ ಸರಪಳಿ ನಿರ್ಮಾಣ:* ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮೀತಿಯ ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ತಾಲ್ಲೂಕು ಕ್ರೀಡಾಂಗಣದಲ್ಲಿ ದ್ವಿಚಕ್ರ ವಾಹನಗಳೊಂದಿಗೆ ಅಧಿಕಾರಿಗಳು, ಸಿಬ್ಬಂದಿಯನ್ನೊಳಗೊಂಡ ಒಂದು ಬೃಹತ್ ವೃತ್ತ ನಿರ್ಮಾಣ ಅದರೊಳಗೆ “ಸ್ವೀಪ್ ಕೊಪ್ಪಳ, ಲೆಟ್ಸ್ ವೋಟ್ ವಿತ್ ಪ್ರೈಡ್, ಸೆಲೆಬ್ರೇಟ್ ದಿ ಬಿಗ್ಗೆಸ್ಟ್ ಫೆಸ್ಟಿವಲ್ ಆಫ್ ಡೆಮೊಕ್ರಸಿ” ಎಂಬ ಘೋಷ ವಾಕ್ಯವನ್ನು ರಚಿಸುವ ಮೂಲಕ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿಯು ಸೈ ಎಂದಿದೆ.
*ಪ್ರತಿಜ್ಞಾವಿಧಿ ಸ್ವೀಕಾರ:* ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ಕಡ್ಡಾವಾಗಿ ಮತದಾನ ಮಾಡುವ ಕುರಿತಾದ ಮತದಾನ ಪ್ರತಿಜ್ಞಾವಿಧಿಯನ್ನು ಕಾರ್ಯಕ್ರಮದಲ್ಲಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಡಿ.ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿಪ್ಪಣ್ಣ ಸಿರಸಂಗಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀಶೈಲ್ ಬಿರಾದಾರ, ಜಿ.ಪಂ ಸಹಾಯಕ ಕಾರ್ಯದರ್ಶಿಗಳಾದ ಶಿವಪ್ಪ ಸುಬೇದಾರ, ಕೊಪ್ಪಳ ತಹಶೀಲ್ದಾರರಾದ ವೀಠ್ಠಲ್ ಚೌಗಲೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ, ತಾಲ್ಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣೇಗೌಡ, ಜಿಲ್ಲಾ ಸ್ವೀಪ್ ಸಂಯೋಜಕರಾದ ಶ್ರೀನಿವಾಸ ಚಿತ್ರಗಾರ ಸೇರಿದಂತೆ ಮತ್ತಿತರರಿದ್ದರು.
*ಗಮನ ಸೆಳೆದ ಬೃಹತ್ ಬೈಕ್ ರ‍್ಯಾಲಿ:* ಮತದಾನ ಜಾಗೃತಿ ಬೈಕ್ ರ‍್ಯಾಲಿಯು ತಾಲ್ಲೂಕು ಕ್ರೀಡಾಂಗಣದಿಂದ ಆರಂಭಗೊಂಡು ಅಶೋಕ ವೃತ್ತ, ಬಸ್‌ನಿಲ್ದಾಣ, ಕಾರ್ಮಿಕ ವೃತ್ತದ ಮಾರ್ಗವಾಗಿ ಭಾಗ್ಯನಗರಕ್ಕೆ ತೆರಳಿ ಪ್ರಮುಖ ವಾರ್ಡ್ಗಳಲ್ಲಿ ಸಂಚರಿಸಿ, ಅಲ್ಲಿಂದ ಓಜಿನಹಳ್ಳಿ ಗ್ರಾಮದಲ್ಲಿ ಸಂಚರಿಸಿ ಭಾಗ್ಯನಗರ-ಕಿನ್ನಾಳ ರಸ್ತೆ ಮೂಲಕ ಟೀರ್ಸ್‍ ಕಾಲೋನಿ, ಕಲ್ಯಾಣ ನಗರ ಮಾರ್ಗವಾಗಿ ಅಶೋಕ ವೃತ್ತದ ಮಾರ್ಗವಾಗಿ ಪುನಃ ತಾಲ್ಲೂಕು ಕ್ರೀಡಾಂಗಣಕ್ಕೆ ತಲುಪಿದ ರ‍್ಯಾಲಿಯು ಎಲ್ಲರ ಗಮನ ಸೆಳೆಯಿತು.
ರ‍್ಯಾಲಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಭಾಗವಹಿಸಿ ಜಾಗೃತಿ ಫಲಕಗಳನ್ನು ಹಿಡಿದು ಮತದಾರರಿಗೆ ಅರಿವು ಮೂಡಿಸಿದರು. ಈ ಬೈಕ್ ರ‍್ಯಾಲಿಗೆ ಕೊಪ್ಪಳ ನಗರಸಭೆ, ಭಾಗ್ಯನಗರ ಪಟ್ಟಣ ಪಂಚಾಯತ್ ಕಸ ವಿಲೇವಾರಿ ವಾಹನಗಳಲ್ಲಿ ಮತದಾನ ಜಾಗೃತಿ ಗೀತೆಗಳನ್ನು ಪ್ರಸಾರ ಮಾಡುವುದರ ಮೂಲಕ ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಿದ್ದು, ವಿಶೇಷವಾಗಿತ್ತು.

Get real time updates directly on you device, subscribe now.

Comments are closed.

error: Content is protected !!