ಅಮಾನತ್ತುಗೊಂಡ ಶಿಕ್ಷಕರ ಸ್ಥಳನಿಯುಕ್ತಿಗೆ ಆಯುಕ್ತರಿಗೆ ಮನವಿ

Get real time updates directly on you device, subscribe now.

: ಸಾರ್ವಜನಿಕರ ದೂರು ಮತ್ತು ಕರ್ತವ್ಯಲೋಪದಡಿಯಲ್ಲಿ ಅಮಾನತ್ತುಗೊಂಡ ಶಿಕ್ಷಕರ ಅಮಾನತ್ತು ತೆರವುಗೊಳಿಸಿ, ಸ್ಥಳ ನಿಯುಕ್ತಿಗೊಳಿಸಲು ಮಾರ್ಗದರ್ಶನ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಶ್ರೆöÊಶೈಲ ಬಿರಾದಾರ ಅವರು ಇಲಾಖೆಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಸಾರ್ವಜನಿಕರ ದೂರು ಮತ್ತು ಕರ್ತವ್ಯಲೋಪದಡಿಯಲ್ಲಿ ಆಡಳಿತಾತ್ಮಕ ಹಿತ ದೃಷ್ಠಿಯಿಂದ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೇಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಭಟ್ ಅವರನ್ನು ದಿನಾಂಕ: 21-12-2023 ರಂದು ಹಾಗೂ ಗಂಗಾವತಿ ತಾಲ್ಲೂಕಿನ ಸಂಗಾಪುರದ ಶ್ರೀರಂಗದೇವರಾಯಲು ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾದ ಪುಷ್ಪಾವತಿ ಎನ್. ಮತ್ತು ಸಹಶಿಕ್ಷಕರಾದ ಶರಣಬಸವರಾಜ ಅವರನ್ನು ದಿನಾಂಕ: 04-04-2024 ರಂದು ಅಮಾನತು ಮಾಡಲಾಗಿತ್ತು.
ಅಮಾನತ್ತುಗೊಂಡ ಶಿಕ್ಷಕರನ್ನು ಅಮಾನತು ವಿಚಾರಣೆ ಕಾಯ್ದಿರಿಸಿ ಕರ್ತವ್ಯಕ್ಕೆ ಪುನರಸ್ಥಾಪನೆ ಹಾಗೂ ಸ್ಥಳ ನಿಯುಕ್ತಿಗೊಳಿಸಿ ತಂತ್ರಾAಶದಲ್ಲಿಯೇ ಖಡ್ಡಾಯವಾಗಿ ಮಾಹಿತಿಯನ್ನು ಇಂಡೀಕರಿಸಬೇಕಿರುವುದರಿAದ 2023-24ನೇ ಸಾಲಿನ ಶಿಕ್ಷಕರ ವಾರ್ಗವಣೆ ಪ್ರಕ್ರಿಯೆ ಮುಕ್ತಾಯದವರೆಗೂ ಪ್ರಸ್ತುತ ಅಮಾನತುಗೊಂಡಿರುವ ಶಿಕ್ಷಕರುಗಳ ಅಮಾನತು ತೆರವುಗೊಳಿಸಿ ಸ್ಥಳನಿಯುಕ್ತಿಗೊಳಿಸುವ ಕುರಿತು ಅನುಮತಿ ಹಾಗೂ ಮಾರ್ಗದರ್ಶನ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದು, ಆಯುಕ್ತರಿಂದ 2-3 ದಿನಗಳಲ್ಲಿ ಅನುಮತಿ ಬರುವುದು. ಅನುಮತಿ ಬಂದ ಕೂಡಲೇ ಶಿಕ್ಷಕರುಗಳ ಅಮಾನತು ತೆರವುಗೊಳಿಸಿ ಸೇವೆಗೆ ಪುನರಸ್ಥಾಪಿಸಲಾಗುವುದು ಎಂದು ಇಲಾಖೆಯ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!