ವೀರ ವಿರಾಗಿಣಿ ಅಕ್ಕಮಹಾದೇವಿ ಜಯಂತಿ ಆಚರಣೆ ಮತ್ತು ಉಡಿ ತುಂಬುವ ಕಾರ್ಯಕ್ರಮ

Get real time updates directly on you device, subscribe now.

ದವನದ ಹುಣ್ಣಿಮೆ.ಭಕ್ತಿ ಜ್ಞಾನ ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮವು ಕೊಪ್ಪಳ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ನಿರ್ಮಲಾ ಬೊಳ್ಳೊಳ್ಳಿ ಅವರ ಮನೆಯಲ್ಲಿ   ಹಮ್ಮಿಕೊಳ್ಳಲಾಗಿತ್ತು. ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಮುತ್ತೈದೆಯರಿಗೆ ಉಡಿ ತುಂಬಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನಿರ್ಮಲ ಬಳ್ಳೊಳ್ಳಿಯವರು ವಹಿಸಿಕೊಂಡಿದ್ದರು.
ಕೊಪ್ಪಳ ತಾಲೂಕಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಅರುಣಾ ನರೇಂದ್ರ ಮತ್ತು ಸಹ ಕಾರ್ಯದರ್ಶಿ ಸೌಮ್ಯ ನಾಲ್ವಾಡ ಅಕ್ಕಮಹಾದೇವಿಯ ವಚನಗಳನ್ನು ಹಾಡಿದರು. ಚೈತ್ರ ಮಂಜುನಾಥ ಕೊಪ್ಪಳ ಇವರು ಸ್ವಾಗತಿಸಿದರು.ಶ್ವೇತಾ ಅಕ್ಕಿ ವಂದಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಧ್ಯಕ್ಷೆ ಸಾವಿತ್ರಿ ಮುಜುಮದಾರ, ಬಣಜಿಗ ಸಂಘದ ತಾಲೂಕ ಅಧ್ಯಕ್ಷೆ ಅಪರ್ಣಾ ಬಸವರಾಜ ಬೊಳ್ಳೊಳ್ಳಿ, ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಹಂಚಿನಾಳ, ಡಾ.ಕವಿತಾ ಹ್ಯಾಟಿ, ಡಾ.ಕಸ್ತೂರಿ ಕರಮುಡಿ, ಶಾರದಾ ಗಣವಾರಿ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!