ಗ್ಯಾರಂಟಿ ಅಲೆ ಎದುರು ಮೋದಿ ಅಲೆ ನಡೆಯಲ್ಲ – ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ಕೊಪ್ಪಳ: ಬೆಲೆ ಏರಿಕೆ, ಜಿಎಸ್‌ಟಿ ಹೊರೆ, ನಿರುದ್ಯೋಗ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ನಿಜವಾದ ಗ್ಯಾರಂಟಿ. ಕಾಂಗ್ರೆಸ್ ಜಾರಿಗೊಳಿಸಿದ ಐದು ಗ್ಯಾರಂಟಿಗಳ ಎದುರು ಪ್ರಧಾನಿ ಮೋದಿಯವರ ಅಲೆ ನಡೆಯಲ್ಲ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷದಲ್ಲಿ ಮೋದಿ ಜಾರಿಗೊಳಿಸಿದ ಜನಪರ ಯೋಜನೆ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಬಹಿರಂಗ ಚರ್ಚೆಯಾಗಲಿ. ಸುಳ್ಳು ಹೇಳಿ ಜನರನ್ನು ಮರಳು ಮಾಡೋ ಜಾಯಮಾನ ಕಾಂಗ್ರೆಸ್‌ನದಲ್ಲ. ಸಮಾಜದಲ್ಲಿ ಆರ್ಥಿಕವಾಗಿ, ಹಿಂದುಳಿದ ಸಮಾಜಗಳನ್ನು ಮೇಲೆತ್ತುವ ಕೆಲಸ ನಾವು ಮಾಡಿದ್ದೇವೆ. ಅಭಿವೃದ್ಧಿಯಲ್ಲಿ ನಾವೆಂದೂ ರಾಜಕಾರಣ ಮಾಡಿದವರಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೂ ಸಾವಿರಾರು ಕೋಟಿ ಅನುದಾನ ನೀಡಿದ್ದೇವೆ. ನಿಮ್ಮ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದೀರಿ ಲೆಕ್ಕ ಕೊಡಿ ಎಂದರು.
ಕಲ್ಯಾಣ ಯೋಜನೆಗಳು ಮತ್ತು ಸರ್ಕಾರದ ಜನಪರ ಕಾರ್ಯಕ್ರಮ ಮೆಚ್ಚಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರುವ ಮೂಲಕ ನಮ್ಮ ಕೈಯನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ. ಪಕ್ಷ ಸೇರ್ಪಡೆಗೊಂಡ ಪ್ರತಿಯೊಬ್ಬರನ್ನೂ ಕಾಂಗ್ರೆಸ್ ಎಂದಿಗೂ ಕೈಬಿಡಲ್ಲ. ಮುಂದಿನ ದಿನದಲ್ಲಿ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡುವ ಭರವಸೆ ನಮ್ಮದು. ಎಲ್ಲರೂ ಒಗ್ಗೂಡಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ:
ನಗರದ ಕಾಂಗ್ರೆಸ್ ಮುಖಂಡ ವಿರುಪಾಕ್ಷಯ್ಯ ಗದುಗಿನಮಠ ನಿವಾಸದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಗತ್ ಗದುಗಿನಮಠ, ಈರಣ್ಣ ಟಾಂಗ, ಮಂಜುನಾಥ ಗದುಗಿನಮಠ, ಗವಿಸಿದ್ದಯ್ಯ ಗದುಗಿನಮಠ, ಚಂದ್ರಯ್ಯ ಹಿರೇಮಠ, ಮರ್ದನ್ ಸಾಬ್ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಡಬ್ಲೂಪಿಐ ತೊರೆದು ಕಾಂಗ್ರೆಸ್ ಸೇರ್ಪಡೆ:
ವೆಲ್ಫರ್ ಪಾರ್ಟಿ ಆಫ್ ಇಂಡಿಯಾದ ಮುಸ್ತಾಫ್ ಹುಡೇದ, ಅಬ್ದುಲ್ ವಾಹೀದ್ ಮುನಿರಾಬಾದ್, ದಾದಾಪೀರ್, ಇರ್ಫಾನ್, ಹನುಮಂತ ಕಬ್ಬೇರ್, ಮೆಹೆಬೂಬ ಪಾಷ ಹೊಸಮನಿ, ದುರಗರಾಜ ಗಂಟಿ, ಚಾಂದಪಾಷ ಬಹದ್ದೂರಬಂಡಿ, ಉಮೇಶ ಕಲಕೇರಿ, ಜಾವೀದ್, ಗಣೇಶ ಕಲಕೇರಿ, ಪರಶುರಾಮ ಹಟ್ಟಿ, ಹನುಮಂತ ಹಟ್ಟಿ, ಶ್ರೀನಾಥ, ಮಂಜುನಾಥ ಶಹಾಪುರ, ಸಂತೋಷ ಕಿನ್ನಾಳ ಸೇರಿದಂತೆ ಅನೇಕರು ಕಾಂಗ್ರೆಸ್ ತತ್ವ ಸಿದ್ಧಾಂತ ಮೆಚ್ಚಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾದಳ ರಾಜ್ಯ ಉಪಾಧ್ಯಕ್ಷ ಜಾಕೀರ ಹುಸೇನ್ ಕಿಲ್ಲೇದಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕಾಟನ ಪಾಷ, ಕಾಂಗ್ರೆಸ್ ಮುಖಂಡರಾದ ವಿರುಪಾಕ್ಷಯ್ಯ ಗದುಗಿನಮಠ, ರಾಮಣ್ಣ ಕಲ್ಲನ್ನವರ್, ಮಂಜುನಾಥ ದಿವಟರ್ ಸೇರಿದಂತೆ ಮತ್ತಿತರರಿದ್ದರು.
ಫೋಟೋ ಕ್ಯಾಪ್ಸನ್: ೦೧ ಕೊಪ್ಪಳದ ವಿರುಪಾಕ್ಷಯ್ಯ ಗದುಗಿನಮಠ ನಿವಾಸದಲ್ಲಿ ಕಾಂಗ್ರೆಸ್ ತತ್ವ ಸಿದ್ಧಾಂತ ಮೆಚ್ಚಿ ವಿವಿಧ ಮುಖಂಡರು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಸೋಮವಾರ ಕಾಂಗ್ರೆಸ್ ಸೇರ್ಪಡೆಗೊಂಡರು.

Get real time updates directly on you device, subscribe now.

Comments are closed.

error: Content is protected !!