ಹುಬ್ಬಳ್ಳಿಯ ಬಿವಿವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಕೊಲೆಯ ಖಂಡನೆ  

Get real time updates directly on you device, subscribe now.

ಕೊಪ್ಪಳ :  ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ್ ವಿದ್ಯಾರ್ಥಿನಿಯ ಕೊಲೆಯನ್ನು ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ. ಮೃತಪಟ್ಟ ವಿದ್ಯಾರ್ಥಿಗೆ ತೀವ್ರ ಸಂತಾಪ ಸೂಚಿಸುತ್ತದೆ. 

 

ಶಾಲಾ ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಅಧಪತನ ಇಂತಹ ಘಟನೆಗಳಿಗೆ ಕಾರಣ. ವಿದ್ಯಾರ್ಥಿಗಳ ಮುಂದೆ ಯಾವುದೇ ಆದರ್ಶಗಳಿಲ್ಲ. ಪಠ್ಯಗಳಲ್ಲಿ ನವೋದಯ ಚಿಂತಕರ, ಕ್ರಾಂತಿಕಾರಿಗಳ ವಿಚಾರ ಪ್ರಕಟಗೊಳ್ಳುವುದಿಲ್ಲ. ಪ್ರೀತಿ- ಪ್ರೇಮದ ವಿಚಾರಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡುವವರೂ ಇಲ್ಲ. ವಿದ್ಯಾರ್ಥಿ ಸಂಘಟನೆಗಳಿಂದ ದೂರ ಇಟ್ಟಿರುವ ಕಾರಣ ಸಾಮಾಜಿಕ ಮನೋಭಾವ ಕುಂಠಿತಗೊಂಡಿದ್ದು ವಿದ್ಯಾರ್ಥಿಗಳ ಆಮೂಲಾಗ್ರ ಬೆಳವಣಿಗೆಗೆ ಅಡ್ಡಿಯಾಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ವಿದ್ಯಾರ್ಥಿಗಳ ನಡುವೆ ಸಾಂಸ್ಕೃತಿಕ ಆಂದೋಲನ ಹರಿಬಿಡಬೇಕು ಎಂದು  ಎ.ಐ.ಡಿ.ಎಸ್.ಓ ಭಾವಿಸುತ್ತದೆ.

ಹಾಗೆಯೇ ಆರೋಪಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು  ಎ.ಐ.ಡಿ.ಎಸ್.ಓ ಕೊಪ್ಪಳ  ಆಗ್ರಹಿಸುತ್ತದೆ. ಎಂದು  ಜಿಲ್ಲಾ ಸಂಚಾಲಕರು  ಗಂಗರಾಜ ಅಳ್ಳಳ್ಳಿ ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!