ಮಹಾವೀರರ ಜೀವನ ಸಮಾಜಕ್ಕೆ ಮಾರ್ಗದರ್ಶನ-ಡಾ. ಕ್ಯಾವಟರ್

Get real time updates directly on you device, subscribe now.

ಕೊಪ್ಪಳ: ಸತ್ಯ, ಶಾಂತಿ, ಅಹಿಂಸೆಯ ತತ್ವದ ಪ್ರತಿಪಾದಕರಾಗಿದ್ದ ಶ್ರೀ ಮಹಾವೀರರ ಜೀವನ ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು.
ನಗರದಲ್ಲಿ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗವಾನ ಶ್ರೀ ಮಹಾವೀರರ ಆದರ್ಶಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕು ನಡೆಸೋಣ ಎಂದರು.
ಮಹನೀಯರ ಜಯಂತಿ ಆಚರಣೆ ಮೂಲಕ ಅವರ ವಿಚಾರಧಾರೆ ತಿಳಿಯಬೇಕು ಹಾಗೂ ಅವುಗಳನ್ನು ಮೈಗೂಡಿಸಿಕೊಳ್ಳಬೇಕು. ಮಹನೀಯರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆಯಾ ಸಮುದಾಯಗಳ ಮಹನೀಯರ ಜಯಂತಿ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಅವರ ಹೆಸರಲ್ಲಿ ನಿಗಮ, ಮಂಡಳಿ ರಚಿಸಿದರು. ಆದ್ದರಿಂದಲೇ ನಿಗಮ, ಮಂಡಳಿ ಮೂಲಕ ಸಮುದಾಯಗಳ ಅಭಿವೃದ್ಧಿ ಆಗುತ್ತಿವೆ ಎಂದರು.
ಈ ಸಂದರ್ಭದಲ್ಲಿ ಜೈನ್ ಸಮಾಜದ ಪ್ರಮುಖರು, ಗುರು ಹಿರಿಯರು, ಮಿತ್ರರು ಜೊತೆಗಿದ್ದರು.

Get real time updates directly on you device, subscribe now.

Comments are closed.

error: Content is protected !!