ಮೋದಿ ಎಂದರೆ ಅಭಿವೃದ್ಧಿ – ಡಾ. ಬಸವರಾಜ ಕ್ಯಾವಟರ್ 

Get real time updates directly on you device, subscribe now.

ಕೊಪ್ಪಳ: ಕಳೆದ ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವೈಖರಿಯಿಂದ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಶಕ್ತಿ ಇಡೀ ವಿಶ್ವಕ್ಕೆ ಪರಿಚಯವಾಗಿದೆ ಎಂದು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಹೇಳಿದರು.
ಲೋಕಸಭಾ ಚುನಾವಣೆ ನಿಮಿತ್ತ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ತಳಕಲ್ ಹಾಗೂ ಇಟಗಿ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಬಹಿರಂಗ ಮತಪ್ರಚಾರದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಯುವಕರಿಗೆ ಉದ್ಯೋಗ, ರೈತರ ಆದಾಯ ಹೆಚ್ಚಳ ಮತ್ತು ಮಹಿಳೆಯರನ್ನು ಸ್ವಾವಲಂಬಿಯನ್ನು ಮಾಡಬೇಕು ಎಂಬ ಉದ್ದೇಶದಿಂದ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ಇದರೊಂದಿಗೆ ದೇಶದ ಸರ್ವತೋಮುಖ ಬೆಳವಣಿಗೆಗೆ ಜೊತೆಗೆ ನಮ್ಮ ಭಾಗವೂ ಅಭಿವೃದ್ಧಿಯಾಗಬೇಕು ಎಂದರು.
ದೇಶವು ಕಾಂಗ್ರೆಸ್ ಸರ್ಕಾರದ ಅವಧಿಯ 70 ವರ್ಷದಲ್ಲಿ ಕಾಣದ ಅಭಿವೃದ್ಧಿಯನ್ನು ಕೇವಲ
10 ವರ್ಷಗಳಲ್ಲಿ ಕಂಡಿದೆ. ಇಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರದಿಂದಾಗಿ ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು. ಹುಬ್ಬಳ್ಳಿಯ ನೇಹಾ ಹಿರೇಮಠ ಯುವತಿಯ ಕೊಲೆ, ಹಲ್ಲೆ ಮತ್ತು ಬಾಂಬ್ ದಾಳಿ ಸೇರಿದಂತೆ ಧರ್ಮಾಧಾರಿತ ಓಲೈಕೆ ರಾಜಕಾರಣ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಗಳು ಕೇವಲ ತಾತ್ಕಾಲಿಕ ಹೊರತು ಶಾಶ್ವತವಲ್ಲ. ಕೇಂದ್ರ ಸರ್ಕಾರದ ಉಜ್ವಲ, ಜಲಜೀವನ್  ಮತ್ತು ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳು ದೇಶದ ಜನತೆಯನ್ನು ಸ್ವಾವಲಂಬಿಯನ್ನಾಗಿ ಮಾಡಿವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿ, ಬೇರೆ ದೇಶಗಳಿಗೆ ಸಲಹೆ ಸೂಚನೆ ನೀಡುವ ಮಟ್ಟಕ್ಕೆ ಭಾರತ ದೇಶ ಬೆಳೆದು ನಿಂತಿದೆ. ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ಭಾರತಕ್ಕೆ ಮಾನ್ಯತೆ ಮತ್ತು ಪ್ರಾಮುಖ್ಯತೆ ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಬಸವರಾಜ ಗುಳಗುಳಿ,  ಶರಣಪ್ಪ ರಾಂಪುರ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಹೇಶ್ವರಿ ಸಾವಳಗಿಮಠ, ಗ್ರಾಂಪಂ ಸದಸ್ಯೆ ಚೈತ್ರಾ ಹಿರೇಗೌಡ್ರ, ಬಸವರಾಜ ಗೌರಾ, ಅಯ್ಯನಗೌಡ ಕೆಂಚಮ್ಮನವರ, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಶಕುಂತಲಾ ಮಾಲಿಪಾಟೀಲ್, ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡ, ಮಂಜುನಾಥ ಸೊರಟುರು,  ಸಿ.ಎಚ್. ಪಾಟೀಲ್, ಬಸಲಿಂಗಪ್ಪ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ತಳಕಲ್ ಮತ್ತು ಇಟಗಿ ಮಹಾಶಕ್ತಿ ಕೇಂದ್ರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಬಸವರಾಜ ಕೆ ಶರಣಪ್ಪ ಬೈಕ್ ರೋಡ್ ಶೋ ಮತ್ತು ಅದ್ದೂರಿ ಮೆರವಣಿಗೆ ಮೂಲಕ ಮತಯಾಚನೆ ಮಾಡಿದರು. ಪಟ್ಟಣಗಳ ಮುಖ್ಯ ಬೀದಿಯಿಂದ ಪ್ರಾರಂಭವಾದ ಮೆರವಣಿಗೆ ಮೂಲಕ ಹನುಮಂತ ದೇವಸ್ಥಾನದವರೆಗೆ ಮುಕ್ತಾಯಗೊಂಡಿತು. ಇದೇ ಸಂದರ್ಭದಲ್ಲಿ ತಳಕಲ್ ಉಡಚಮ್ಮ ಮತ್ತು ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

Get real time updates directly on you device, subscribe now.

Comments are closed.

error: Content is protected !!