ಯೋಜನೆಗಳೇ ಜಾರಿಯಾಗೋದಾದರೇ ಅಭ್ಯರ್ಥಿ ಯಾಕೆ ಬೇಕು- ಸಂಗಣ್ಣ ಕರಡಿ ಪ್ರಶ್ನೆ

Get real time updates directly on you device, subscribe now.


— ಸ್ವಾಭಿಮಾನಕ್ಕೆ ಧಕ್ಕೆಯಿಂದ ಪಕ್ಷ ತೊರೆದಿರುವೆ
ಕೊಪ್ಪಳ:
ಯೋಜನೆಗಳೇ ಜಾರಿಯಾಗೋದಾದರೇ ಅಭ್ಯರ್ಥಿಯನ್ನು ಯಾಕೆ ನಿಲ್ಲಿಸಬೇಕಿತ್ತು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಗಣ್ಣ ಕರಡಿ ಸಿ.ಟಿ.ರವಿ ಅವರಿಗೆ ತಿರುಗೇಟು ನೀಡಿದರು.

ಸಂಸದರ ಮನೆಯಲ್ಲಿ ಉಫರ್ ಸೇವಿಸಿದ ಶಾಸಕ ರಾಘವೇಂದ್ರ ಹಿಟ್ನಾಳ್

ಇಲ್ಲಿನ ನಗರದ ಕರಡಿ ಸಂಗಣ್ಣನವರ ನುವಾಸದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪೂಜಾರಿ ಪಕ್ಷ ಬಿಟ್ಟಿದ್ದಾನೆ, ದೇವರು ಎಲ್ಲಿಯೂ ಹೋಗಿಲ್ಲ ಎಂಬ ಸಿ.ಟಿ.ರವಿ ಹೇಳಿಕೆಗೆ ಉತ್ತರಿಸಿದ ಅವರು, 2018ರ ಚುನಾವಣೆಯಲ್ಲಿ ಸಿ.ವಿ. ಚಂದ್ರಶೇಖರ ಅವರಿಗೆ ಟಿಕೆಟ್ ಘೋಷಣೆ ಮಾಡಿದಾಗ ನಮ್ಮ ಅಭಿಪ್ರಾಯ ಕೇಳಲಿಲ್ಲ. 2023ರ ಚುನಾವಣೆಯಲ್ಲಿ ನನ್ನ ಹೊರತುಪಡಿಸಿ ಕುಟುಂಬದ ಯಾವ ಸದಸ್ಯರು ಸ್ಪರ್ಧೆ ಮಾಡಬಾರದು ಎಂದು ನಿರ್ಧಾರ ಮಾಡಿದ್ವಿ. ಆದರೆ, ಮಹಿಳಾ ಕೂಟದಲ್ಲಿ ಶೋಭಾ ಕರಂದ್ಲಾಜೆ ಅವರು ಟಿಕೆಟ್ ನೀಡುತ್ತೇವೆ ಎಂದು ಹೇಳಿದರು. ನಮಗೆ ಸ್ಪರ್ಧೆ ಮಾಡಬೇಕೆಂಬ ಯಾವ ಉದ್ದೇಶ ಇರಲಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕಬ ಉದ್ದೇಶದಿಂದ ಸೊಸೆ ಮಂಜುಳಾ ಕರಡಿಗೆ ನೀಡಿದರು. ಆದರೆ, ಬಿಜೆಪಿಯಲ್ಲಿನ ಕೆಲ ಮುಖಂಡರು ನಮ್ಮ‌ಮೇಲೆ ಆರೋಪ ಮಾಡುವ ಮೂಲಕ ಎರಡು ಚುನಾವಣೆಯಲ್ಲಿ ನಮ್ಮನ್ನು ವಿಲನ್ ಮಾಡಿದರು. ಇದಕ್ಕೆ ಮೊದಲು ಸಿ.ಟಿ.ರವಿ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ ಸಾಮಾನ್ಯ. ಎಲ್ಲವನ್ನೂ ಸ್ವೀಕರಿಸುವೆ. ಟಿಕೆಟ್ ಸಿಗೋದು, ಸಿಗದೇ ಇರುವುದು ಮುಖ್ಯವಲ್ಲ. ಕುಟುಂಬದಲ್ಲಿ ಸೌಜನ್ಯತೆ ಇಲ್ಲ. ಪಕ್ಷ ಸಂಘಟನೆ, ಅಭಿವೃದ್ಧಿ ಹೇಗೆ ಮಾಡಬೇಕೆಂಬ ಚರ್ಚೆ ಮಾಡದೇ ಇರುವುದು ನೋವುಂಟು ಮಾಡಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದರಿಂದ ಪಾರ್ಟಿ ತೊರೆದಿದ್ದೇನೆ. ಟಿಕೆಟ್ ಕೈತಪ್ಪಿದಕ್ಕಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನೂರಕ್ಕೆ ನೂರು ಗೆಲುವು ಸಾಧಿಸುವ ವಿಶ್ವಾಸವಿದೆ. ಸಿಂಗಟಾಲೂರು ಏತ ನೀರಾವರಿ, ರಾಯಚೂರು ವರೆಗೆ ರೇಲ್ವೆ ವಿಸ್ತರಣೆ ಮತ್ತು ವಿಮಾನ ನಿಲ್ದಾಣ ಸೇರಿದಂತೆ ಅನೇಕ ಯೋಜನೆ ಕಾರ್ಯಗತಗೊಳಿಸುವ ಉದ್ದೇಶ ನಮ್ಮದಾಗಿದ್ದು, ಬರುವ ದಿನಗಳಲ್ಲಿ ಎಲ್ಲರೂ ಒಗ್ಗೂಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು‌.

ಕಾರ್ಯಕರ್ತರ ವನವಾಸ ಮುಗಿದಿದೆ ಎಂಬ ಸಿ.ವಿ. ಚಂದ್ರಶೇಖರ್ ಹೇಳಿಕೆಗೆ ಉತ್ತರಿಸಿದ ಅವರು, ಚಂದ್ರಶೇಖರ್ ಅವರಿಗೆ ಒಳ್ಳೆದಾಗಲಿ, ಕಾರ್ಯಕರ್ತರಿಗೂ ಅವಕಾಶ ಸಿಗಲಿ ಎಂದ ಅವರು, ಎರಡು ಬಾರಿ ಸಂಸದ ಮತ್ತು ಶಾಸಕರಾದರೂ ನನಗೆ ದುರಾದೃಷ್ಟ ಮಂತ್ರಿ ಸ್ಥಾನ ಸಿಗಲಿಲ್ಲ. ಅವಾಗ ನಾನು ಯಾಕೆ ಸಚಿವ ಸ್ಥಾನ ನೀಡಲ್ಲ ಎಂದು ಟೀಕೆ ಮಾಡಬಹುದಿತ್ತು. 1978 ರಲ್ಲೇ ಮಾಜಿ ಸಂಸದ ಎಚ್.ಜಿ. ರಾಮುಲು ಮತ್ತು ಖಾದರಿಯವರು ನನಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ನೀಡಿದರು. ಅಂದೇ ಕಾಂಗ್ರೆಸ್ ಪಕ್ಷದಲ್ಲಿದ್ದೆ ಎಂದು ಕಾಂಗ್ರೆಸ್ ಸೇರ್ಪಡೆ ಕುರಿತು ಸಮರ್ಥಿಸಿಕೊಂಡರು.

ಕೊಪ್ಪಳ ಕ್ಷೇತ್ರಕ್ಕೆ ಜನಾರ್ಧರೆಡ್ಡಿ ಸ್ಪರ್ಧೆ ಮಾಡದಂತೆ ಹಲವರಿಂದ ನನ್ನ ಮೇಲೆ ಒತ್ತಡ ಹೇರಿದ್ದರು ಎಂಬ ಜನಾರ್ಧರೆಡ್ಡಿ ಹೇಳಿಕೆಗೆ ಉತ್ತರಿಸಿ, ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ,
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಯಾರು ಯಾರ ಬಳಿಯೂ ಏನನ್ನೂ ಹೇಳಿ ಕಳಿಸಿಲ್ಲ. ತಾಕತ್ತಿದ್ರರೇ ಅವರು ಅಂದೇ ಕೊಪ್ಪಳಕ್ಕೆ ತಮ್ಮ ಅಭ್ಯರ್ಥಿ ಇಳಿಸಬಹುದಿತು. ಸೋಲಿನ ಭಯದಿಂದ ಹೀಗೆ ಮಾತನಾಡಿದ್ದಾರೆ.
ಯಾರು ಮತದಾರ ಪ್ರಭುಗಳ ಪರವಾಗಿ ಇರುತ್ತಾರೋ ಅವರಿಗೆ ಜನಸಾಮಾನ್ಯರು ಅವಕಾಶ ನೀಡುತ್ತಾರೆ. ಅವಾಗ ಯಾರು ಯಾರ ಠೇವಣಿ ಕಳೆದುಕೊಳ್ಳುತ್ತಾರೇ ನೋಡೋಣ. ನಾವು ಆರೋಗ್ಯಯುತ ಚುನಾವಣೆ ನಡೆಸುತ್ತೇವೆ. ಆರೋಪ ಮಾಡೋರಿಗೆ ಜೂ.4 ಕ್ಕೆ ಉತ್ತರ ಕೊಡುತ್ತೇವೆ ಎಂದು ಪರೋಕ್ಷವಾಗಿ ರೆಡ್ಡಿಗೆ ಸವಾಲು ಹಾಕಿದರು.

ಕಳೆದ 35 ವರ್ಷಗಳಿಂದ ಹಿಟ್ನಾಳ ಮತ್ತು ಕರಡಿ ಕುಟುಂಬಗಳು ವಿರೋಧ ಪಕ್ಷದವರಾಗಿದ್ದೇವು. ಸಂಗಣ್ಣ ಕರಡಿಯವರು ತಂದೆ ಸಮಾನರು. ಅಭಿವೃದ್ಧಿ ದೃಷ್ಟಿಯಿಂದ ನಾವಿಬ್ಬರೂ ಒಂದಾಗುವ ಕಾಲ ಕೂಡಿ ಬಂದಿದೆ. ಈ ಹಿಂದೆ ನಾವಿಬ್ಬರೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಕೆಲವರು ಎರಡು ಕುಟುಂಬಗಳ ನಡುವೆ ಅಪಪ್ರಚಾರ ಮಾಡುತ್ತಿದ್ದಾರೆ. ಸಂಗಣ್ಣ ಕರಡಿ ಅವರು ಕೇವಲ ವ್ಯಕ್ತಿಯಲ್ಲ, ಕಾಂಗ್ರೆಸ್ ಪಕ್ಷಕ್ಕೆ ಅವರೊಂದು ದೊಡ್ಡಶಕ್ತಿಯಾಗಿದ್ದಾರೆ. ಸೇರ್ಪಡೆಯಿಂದ ಎರಡ್ಮೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದ ಅವರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಮ್ಮೊಂದಿಗೆ ಇದ್ದಾರೆ. ಯಾವುದೇ ಮುನಿಸು ಇಲ್ಲ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ ಹುಲಿಗಿ, ಕಾಂಗ್ರೆಸ್ ಮುಖಂಡರಾದ ವೀರನಗೌಡ ಪಾಟೀಲ್, ಪ್ರಸನ್ನ ಗಡಾದ, ಅಮರೇಶ ಕರಡಿ ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!