೨೪ ತಾಸುಗಳಲ್ಲಿ ಕೊಲೆ ಪ್ರಕರಣ ಬೇಧಿಸಿದ ಕೊಪ್ಪಳ ಪೊಲೀಸರು

Get real time updates directly on you device, subscribe now.

ಕೊಪ್ಪಳ : ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಬೇರೆಯವರ ಜೊತೆ ಸಂಬದ ಹೊಂದಿದ್ದ ಹಿನ್ನೆಲೆ ಕೊಲೆ  ಮಾಡಿದ ಘಟನೆ ಬೇಧಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಿಯತಮ ನನ್ನು ಕೊಂದ ಪ್ರಿಯತಮೆಯನ್ನು ಬಂಧಿಸಲಾಗಿದೆ.

ಬಹದ್ದೂರ್ ಬಂಡಿ ಯಲ್ಲಿ ೧೬ರಂದು ನಡೆದ ಕೊಲೆ ಪ್ರಕರಣದಲ್ಲಿ ಶ್ರೀನಾಥ್ ಎನ್ನುವ ವ್ಯಕ್ತಿ ಕೊಲೆಯಾಗಿತ್ತು. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ವಿವರ್ ಹೀಗಿದೆ

ಕೊಪ್ಪಳ ಜಿಲ್ಲೆ, ಕೊಪ್ಪಳ ಗ್ರಾಮೀಣ ವೃತ್ತ ವ್ಯಾಪ್ತಿಯ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಹದ್ದಿಯ ಬಹದ್ದೂರ ಬಂಡಿ ದಲ್ಲಿ ಬಂಜಾರ ಸಮುದಾಯದವರ ಹೋಳಿ ಉತ್ಸವಕ್ಕೆ ಹೋಗುವ ದಾರಿಯಲ್ಲಿ, ದಿನಾಂಕ-16-04-2024 ರಂದು ಬೆಳಗಿನ ಜಾವ  ಗಂಟೆಗೆ ಶ್ರೀನಾಥ ತಂದೆ ಮಹಾದೇವ ಖಾರ್ವಿ, ಸಾ: ಬಳಂಬಾರ ತಾ:ಅಂಕೋಲ ಜಿ:ಉತ್ತರಕನ್ನಡ ಇತನನ್ನು ಯಾರೋ ದುಷ್ಕರ್ಮಿಗಳು  ಯಾವುದೋ ಉದ್ದೇಶಕ್ಕೆ ಕೊಲೆ ಮಾಡಿದ ಘಟನೆ ಕುರಿತು  ಮಂಜುನಾಥ ನಡುವಿನಮನಿ ಸಾ:ಬಹದ್ದುರಬಂಡಿ ಇವರು ಫಿರ್ಯಾದಿ ಮೇಲಿಂದ ದಿನಾಂಕ-16.04.2024 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ-68/2024 ಕಲಂ- ಐಪಿಸಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡಿ, ಪ್ರಕರಣವನ್ನು ಬೇದಿಸಲು ಶ್ರೀಮತಿ ಯಶೋಧಾ ನೋಡಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ,  ಹೇಮಂತ್‌ಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಜುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ  ಸುರೇಶ ಡಿ. ವೃತ್ತ ನಿರೀಕ್ಷಕರು ಕೊಪ್ಪಳ ಹಾ ವೃತ್ತರವರ ನೇತೃತ್ವದಲ್ಲಿ ಡಾಕೇಶ ಪಿ.ಎಸ್.ಐ (ಕಾ&ಸು) ಕೊಪ್ಪಳ ಗ್ರಾಮೀಣ ಠಾಣೆ, ಶ್ರೀಮತಿ ಉಮೇರಾಬಾನು ಪಿ.ಎಸ್.ಐ. ನಗರ ಠಾಣೆ, ಶ್ರೀಮತಿ ಮೀನಾಕ್ಷಿ ಪಿ.ಎಸ್.ಐ ಮುನಿರಬಾದ ಠಾಣೆ, ಮತ್ತು ಸಿಬ್ಬಂದಿಯವರಾದ ಸೋಮಶೇಖರ, ಮಹೇಶ ಚಂದಪ್ಪ ನಾಯ್ಕ, ರಂಗನಾಥ, ಮಾರುತಿ, ತಾಜುದ್ದೀನ್, ಉಮೇಶ ನಾಯ್ಕ, ಚಂದಾಲಿಂಗ, ನಿರುಪಾದಿ ಶ್ರೀಮತಿ ಕವಿತಾ, ರವೀನಾ, ಕು.ಚೈತ್ರಾ, ಪ್ರಸಾದ್, ಕೊಟೇಶ ಮತ್ತು ಚಾಲಕರಾದ ಚಂದ್ರಶೇಖರ, ಮೈಬೂಬ ರವರನ್ನು ಒಳಗೊಂಡ ವಿಶೇಷ ಪತ್ತೆ ನ್ನು ರಚನೆ ಮಾಡಲಾಗಿತ್ತು.

ಈ ರೀತಿಯಲ್ಲಿ ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷೇತ್ರ ಕಾರ್ಯಾಚರಣೆ ತು ಮಾಹಿತಿಯನ್ನು ಸಂಗ್ರಹಿಸಿ ಕೊಲೆ ಮಾಡಿದ ಆರೋಪಿತಳಾದ ಖಾಜಬನಿ ಗಂಡ ಕಬೀರಹುಸೇನ ಹಾಲ ಬದ್ದೂರಬಂಡಿ, ತಾ:ಬೆ: ಕೊಪ್ಪಳ ಇವಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ತನ್ನ ಜೊತೆಗೆ ಸಂಪರ್ಕ ಇಟ್ಟುಕೊಂಡಿ ಶ್ರೀನಾಥ ಇನ್ನೂ ಬೇರೆ ಹೆಣ್ಣು ಮಕ್ಕಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದು, ಎಷ್ಟು ಹೇಳಿದರೂ ಕೇಳದೇ ತನ್ನ ಹಳೆಯ ಮನ್ನೇ ಮುಂದುವರಿಸಿದ್ದರಿಂದ, ಹೇಗಾದರೂ ಮಾಡಿ ಸಾಯಿಸಿ ಬಿಡಬೇಕು ಅಂತಾ ತೀರ್ಮಾನ ಮಾಡಿ, ದಿನಾಂಕ: 16-01- ಹಂದು ಬೆಳಗಿನ ಜಾವ 1:00 ಗಂಟೆಯ ಸಮಾರಿಗೆ ಬಹದ್ದೂರಬಂಡಿ ಗ್ರಾಮದ ಹೋಳಿ ಉತ್ಸವಕ್ಕೆ ಹೋಗುವ ದಾರಿಯಲ್ಲಿ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ. ಆಪಾದಿತಳನ್ನು ನಿಯಮಾನುಸಾರ ವಶಕ್ಕೆ ಪಡೆಯ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ಪ್ರಾರಂಭದಲ್ಲಿ ಕೊಲೆ ಮಾಡಿದ ಆಪಾದಿತರ ಮಾಹಿತಿಯೇ ಇಲ್ಲದ ಸೂಕ್ಷ್ಮ ರೀತಿಯ ಕೊಲೆ ಪ್ರಕರಣವನ್ನು ಪ್ರಕರಣ = 24 ಗಂಟೆಯೊಳಗಾಗಿ ಪತ್ತೆ ಮಾಡಿ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷರು ವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: