ಸಿವಿಸಿ ಬಿಜೆಪಿ ಸೇರ್ಪಡೆ ಖಚಿತ?
ಕೊಪ್ಪಳ ರಾಜ್ಯ ಜೆಡಿಎಸ್ ನ ಕೊರ್ ಕಮಿಟಿ ಸದಸ್ಯ ಸಿವಿ ಚಂದ್ರಶೇಖರ್ ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ನಿನ್ನೆಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕೌಂಟರ್ ನಾಮಪತ್ರ ಸಲ್ಲಿಕೆ ಹಾಗೂ ಸಮಾವೇಶದ ನಂತರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿಟಿ ರವಿ ಜನಾರ್ದನ್ ರೆಡ್ಡಿ ಸೇರಿದಂತೆ ಇತರ ಎಲ್ಲಾ ಪ್ರಮುಖ ಬಿಜೆಪಿ ನಾಯಕರು ಸಿವಿ ಚಂದ್ರಶೇಖರ್ ಮನೆಗೆ ಭೇಟಿ ನೀಡಿ ಆತಿಥ್ಯವನ್ನು ಸವಿದರು .
ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಸಿವಿ ಚಂದ್ರಶೇಖರ್ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿದ್ದರು. ನಿನ್ನೆ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ನಾಯಕರು ಕೊಪ್ಪಳ ರಾಜಕಾರಣದ ಬಗ್ಗೆ ಚರ್ಚಿಸಿದರು. ಇವೆಲ್ಲ ಬೆಳವಣಿಗೆಗಳ ನಡುವೆ ಸಿವಿ ಚಂದ್ರಶೇಖರ್ ಮತ್ತೆ ಬಿಜೆಪಿ ಪಕ್ಷಕ್ಕೆ ಮರಳುವುದು ಖಚಿತ ಎಂದೆ ಹೇಳಲಾಗುತ್ತಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಲೀಡ್ ನೀಡುವ ಮೂಲಕ ಡಾ. ಬಸವರಾಜ್ ಕೌಟರನ್ನು ಗೆಲ್ಲಿಸುತ್ತೇವೆ- ಸಿವಿ ಚಂದ್ರಶೇಖರ್
Comments are closed.