ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಕೊಪ್ಪಳ:
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ನಾಯಕತ್ವ ಮೆಚ್ಚಿ ಜಿಲ್ಲಾ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಹಲವು ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಕೊಪ್ಪಳ ಕ್ಷೇತ್ರದ ಮುಖಂಡರಾದ ಮಸ್ತೇಪ್ಪ ಕಟ್ಟಿಮನಿ, ಸುಂಕಪ್ಪ ಮಾಲಗಿತ್ತಿ, ರಾಮಣ್ಣ ಪೂಜಾರ ,ಲಕ್ಷ್ಮಣ್ಣ ಪೂಜಾರ ,ರಾಮಣ್ಣ ಅಳವಂಡಿ, ವೆಂಕಟೇಶ್ ಆನಂದಹಳ್ಳಿ,ಯಕಂಪ್ಪ ಬಿಳಿತ್ತೆ ಹಾಗೂ ಅನೇಕ ಸಮಾಜದ ಮುಖಂಡರು ಯುವಕರು ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವನಾಯಕ. ಅವರ ಆಡಳಿತ ವಿಶ್ವಕ್ಕೆ ಮಾದರಿ. ಬಿಜೆಪಿ ತತ್ವ, ಸಿದ್ದಾಂತ ಹಾಗೂ ಮೋದಿಯವರ ಆಡಳಿತ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ದೇಶದ ಅಭಿವೃದ್ಧಿಗಾಗಿ ಪಕ್ಷ ಸೇರ್ಪಡೆಗೊಂಡು ಬಿಜೆಪಿ ಬಲ ಪಡಿಸಿ ಎಂದರು.
ಈ ವೇಳೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ, ಹಿರಿಯ ಮುಖಂಡರಾದ ಕೆ.ಜಿ.ಕುಲಕರ್ಣ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.