ಹಿರೇಸಿಂದೋಗಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಉಚಿತ ಪ್ರವೇಶ

Get real time updates directly on you device, subscribe now.

ಎಸ್ .ಎಸ್ .ಎಲ್ .ಸಿ. ಪೂರಕ ಪರೀಕ್ಷೆಯಲ್ಲಿ ಪಾಸಾದವರಿಗೂ ಸಹ ಹಿರೇಸಿಂದೋಗಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಉಚಿತ ಪ್ರವೇಶವಿದೆ – ಹನುಮಂತಪ್ಪ ಅಂಡಗಿ

ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎಸ್ .ಎಸ್. ಎಲ್. ಸಿ. ಯ ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೂ ಸಹ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗಕ್ಕೆ ಉಚಿತ ಪ್ರದೇಶವಿದೆ. ಆ ಗ್ರಾಮದ ಸದಾಶಿವರೆಡ್ಡಿ ಮಾದಿನೂರು ಅವರು ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಬರಿಸಲು ಸಿದ್ಧರಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಆ ಭಾಗದಲ್ಲಿ ಬರುವ ಬೂದಿಹಾಳ, ಡಂಬ್ರಹಳ್ಳಿ, ಬೇಳೂರು, ಕಾತರಕಿ, ನೀರಲಗಿ, ಬೆಟಗೇರಿ, ಹನಕುಂಟಿ, ಬಿಸರಹಳ್ಳಿ, ಮೈನಹಳ್ಳಿ, ಬಿಕನಹಳ್ಳಿ ಕೋಳೂರು, ಕಾಟ್ರಳ್ಳಿ, ಅಳವಂಡಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರಪತ್ರಗಳನ್ನು ಹಂಚಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಅಳವಂಡಿ ಗ್ರಾಮದಲ್ಲಿ ಕರಪತ್ರಗಳನ್ನು ಹಂಚಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರೇ ಆಗಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ದಾನಿಗಳಿಂದ ಹಣ ಪಡೆದು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ವಾಣಿಜ್ಯ ವಿಭಾಗದ ನುರಿತ ಉಪನ್ಯಾಸಕರಿದ್ದು, ಈ ಭಾಗದ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು. ಉಪನ್ಯಾಸಕರಾದ ವೀರಣ್ಣ ಜೋಗಿನ್, ಗ್ರಾಮಸ್ಥರಾದ ಸತೀಶ ಕಟ್ಟಿಮನಿ, ಆನಂದ ಸಾಲಮನಿ, ಶ್ರೀಕಾಂತ ಮಡಿವಾಳರ, ಮಂಜು ಕೊರವರ, ಯಮನೂರಪ್ಪ ಯಲ್ಲಣ್ಣನವರ, ಮಹಾಂತೇಶ ಗಂಗಣ್ಣವರ, ದುರಗಪ್ಪ ಪೂಜಾರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!