ಸ್ಪಂದನಶೀಲ ಕೃತಿ ನಾಳೆ ಲೋಕಾರ್ಪಣೆ
ಜಿ.ಎಸ್.ಗೋನಾಳರ ಆಯ್ದ ಕೃತಿಗಳ ಅವಲೋಕನದ ಲೇಖನಗಳ ಸಂಕಲನ
ಕೊಪ್ಪಳ :ಚನ್ನಬಸವ ಪ್ರಕಾಶನ, ಮಾನಸ ಪ್ರಕಾಶನ, ಸಮಸಿರಿ ಕನ್ನಡ ಪ್ರಕಾಶನ ಕೊಪ್ಪಳ ಹಾಗೂ ಸಿರಿಗನ್ನಡ ವೇದಿಕೆ ಜಿಲ್ಲಾಘಟಕಇವರ ಸಂಯುಕ್ತಾಶ್ರಯದಲ್ಲಿ ಶರಣಬಸಪ್ಪ ಬಿಳಿಎಲೆ ಹಾಗೂ ಮಂಜುನಾಥಚಿತ್ರಗಾರ ಸಂಪಾದಕತ್ವದ ಜಿ.ಎಸ್.ಗೋನಾಳರ ಆಯ್ದ ಕೃತಿಗಳ ಅವಲೋಕನದ ಸಂಕಲನ ಸ್ಪಂದನಶೀಲ ಕೃತಿಯನ್ನುಜುಲೈ ೨ ರಂದು ಲೋಕಾರ್ಪಣೆಗೊಳ್ಳಲಿದೆ.
ಅಂದು ನಗರದತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯುವಕಾರ್ಯಕ್ರಮದಲ್ಲಿ ಸ್ಪಂದನಶೀಲ ಕೃತಿ ಲೋಕಾರ್ಪಣೆ, ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರ,ಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಉದ್ಘಾಟನೆಯನ್ನು ಹಿರಿಯ ಸಾಹಿತಿ, ಚಿಂತಕಗದಗಿನಡಿ.ವ್ಹಿ.ಬಡಿಗೇರ ನೆರವೇರಿಸುವರು. ಚನ್ನಬಸವ ಪ್ರಕಾಶನದ ಪ್ರಕಾಶಕರಾದ ಶರಣಬಸಪ್ಪ ಬಿಳಿಎಲೆ ಅಧ್ಯಕ್ಷತೆಯನ್ನು ವಹಿಸಲಿದ್ದು, ಜಿಲ್ಲಾ ಪಂಚಾಯತ್‌ನ ಮುಖ್ಯ ಲೆಕ್ಕಾಧಿಕಾರಿಅಮೀನ್‌ಅತ್ತಾರರವರು ಸ್ಪಂದನಶೀಲ ಕೃತಿಯನ್ನು ಬಿಡುಗಡೆಗೊಳಿಸುವರು.ಗಂಗಾವತಿಯ ಸಾಹಿತಿ, ಉಪನ್ಯಾಸಕ ಶಿವಾನಂದ ಮೇಟಿಕೃತಿಯಕುರಿತು ಮಾತನಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡ್ರ, ಮೀಡಿಯಾಕ್ಲಬ್‌ನಅಧ್ಯಕ್ಷ ಶರಣಪ್ಪ ಬಾಚಲಾಪೂರ, ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಬಸವರಾಜಗುಡ್ಲಾನೂರು, ರಾಜ್ಯ ಸಮಿತಿಯ ಎಂ.ಸಾದಿಕ್ ಅಲಿ, ಎ.ಎನ್.ಎಮ್.ಟಿ.ಸಿ.ಬಾಗಲಕೋಟನ ಬಾಲಕೃಷ್ಣ ಎಮ್.ಚಿತ್ರಗಾರ, ಸಂಶೋಧಕರು ಹಾಗೂ ಎಸ್.ಜಿ.ಕಾಲೇಜಿನಉಪನ್ಯಾಸಕ ಡಾ.ಸಿದ್ಲಿಂಗಪ್ಪ ಕೊಟ್ನೇಕಲ್ ಭಾಗವಹಿಸಲಿದ್ದಾರೆ.
ನಂತರ ನಡೆಯುವ ಕವಿಗೋಷ್ಠಿ ಕಾರ್ಯಕ್ರಮದಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಿ.ಎಮ್.ಬಡಿಗೇರ ವಹಿಸಲಿದ್ದು, ಸ.ಪ್ರ.ದರ್ಜೆಕಾಲೇಜುಯಲಬುರ್ಗಾದ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರಆಶಯ ನುಡಿ ವ್ಯಕ್ತಪಡಿಸಲಿದ್ದು, ಶಿಶು ಸಾಹಿತಿ ಶ್ರೀನಿವಾಸ ಚಿತ್ರಗಾರ, ಹಿರಿಯ ಸಾಹಿತಿ ಸಾವಿತ್ರಿ ಮುಜುಮದಾರ, ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಉಮೇಶಬಾಬು ಸುರ್ವೆ, ಸಿರಿಗನ್ನಡ ವೇದಿಕೆ ಕೊಪ್ಪಳ ತಾಲೂಕಾಧ್ಯಕ್ಷ ಗವಿಸಿದ್ದಪ್ಪ ಬಾರಕೇರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕವಿಗೋಷ್ಠಿಯಲ್ಲಿ ಶ್ರೀಮತಿ ಶಾರದಾಎಸ್.ರಜಪೂತ, ಮಹೇಶ ಬಳ್ಳಾರಿ, ಸುಮಿತ್ರಾ ಬಿ.ಚಿತ್ರಗಾರ, ಮೈಲಾರಪ್ಪ ಉಂಕಿ, ಅಹ್ಮದಅಲಿರಾಜಯಲಬುರ್ಗಾ, ವೀರಯ್ಯ ಪೂಜಾರ, ಪ್ರದೀಪ್ ಹದ್ದಣ್ಣನವರ, ಎಚ್.ಆರ್.ವಸ್ತ್ರದ, ಸಿದ್ದಯ್ಯ ಹಿರೇಮಠ, ಅನ್ನಪೂರ್ಣ ಮನ್ನಾಪೂರ, ಪುಷ್ಪಲತಾ ಏಳುಬಾವಿ, ಶಿಲ್ಪಾ ವ್ಹಿ,ಮ್ಯಾಗೇರಿ, ಶ್ರೀಮತಿ ನಿಂಗಮ್ಮ ಪಟ್ಟಣಶೆಟ್ಟಿ, ಶಾಂತಪ್ಪ ಪಟ್ಟಣಶೆಟ್ಟಿ, ಕಲ್ಲಪ್ಪ ಕವಳಕೇರಿ, ಯಲ್ಲಪ್ಪ ಹರನಾಳಗಿ, ರಂಗನಾಥಅಕ್ಕಸಾಲಿಗರ ಭಾಗವಹಿಸಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
Comments are closed.