ದೇಶಕ್ಕೆ ಮೋದಿ, ಕೊಪ್ಪಳಕ್ಕೆ ಡಾ.ಬಸವರಾಜ- ಅರುಣಾ ರೆಡ್ಡಿ
ಸಿರುಗುಪ್ಪ: ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ಅದೇ ರೀತಿ ಕೊಪ್ಪಳ ಲೋಕಸಭೆಗೆ ಡಾ.ಬಸವರಾಜ ಕ್ಯಾವಟರ್ ಸಂಸದರಾಗಿ ಆಯ್ಕೆಯಾಗಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಪಕ್ಷದ ಸಾಧನೆ ಮುಟ್ಟಿಸಬೇಕು ಎಂದು ಅರುಣಾ ರೆಡ್ಡಿ ಹೇಳಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾವಿಹಳ್ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ವ್ಯಾಪ್ತಿಗೆ ಬರಲಿದ್ದು, ಇಲ್ಲಿನ ಮತದಾರರು ಪ್ರತಿ ಬಾರಿಯೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಡಾ. ಬಸವರಾಜ ಕ್ಯಾವಟರ್ ಅವರನ್ನು ಗೆಲ್ಲಿಸಿ ಸಂಸತ್ ಗೆ ಕಳುಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ, ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮಾಜಿ ಸಂಸದ ಶಿವರಾಮಗೌಡ, ಮಂಡಲದ ಅಧ್ಯಕ್ಷ ಎಚ್ಎಸ್ ಮಲ್ಲಿಕಾರ್ಜುನ್, ಕೆಆರ್‌ಪಿಪಿ ಮುಖಂಡ ದರಪ್ಪ ನಾಯಕ , ಬಳ್ಳಾರಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ಮುಖಂಡರಾದ ಸಿದ್ದಪ್ಪ ತಕ್ಕಲಕೋಟೆ, ಶರಣಪ್ಪ ಸಾಹುಕಾರ, ಎಚ್ ಶಿವರಾಮೇಗೌಡ, ಮೂಕಲ್ ವೀರೇಶ್, ನಾಗೇಶಪ್ಪ, ಕುಮಾರ್ ನಾಯಕ್, ನಾಗರಾಜು, ಸಿದ್ದಯ್ಯ, ಗಂಗಾಧರ್ ಸೇರಿ ಮತ್ತಿತರರಿದ್ದರು.
ಅದ್ದೂರಿ ರೋಡ್ ಶೋ:
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾವಿಹಳ್ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು ಅದ್ದೂರಿ ರೋಡ್ ಶೋ ಜರುಗಿತು. ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಸೋಮಲಿಂಗಪ್ಪ, ಅರುಣಾ ರೆಡ್ಡಿ ಸಾಥ್ ನೀಡಿದರು. ರಸ್ತೆಯುದ್ಧಕ್ಕೂ ಪಠಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ರೋಡ್ ಶೊ ನಲ್ಲಿ ಬಾಗಿಯಾಗಿದ್ದರು. ಇದೇ ವೇಳೆ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
Comments are closed.