ಬಿಜೆಪಿ ಗೆಲುವಿಗೆ ಮತ ನೀಡಿ- ಗುಳಗಣ್ಣನವರ್

Get real time updates directly on you device, subscribe now.

Kannadanet NEWS 24×7 

1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು-ಸುರೇಶ ಭೂಮರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷರು.

ಕೊಪ್ಪಳ: ವಿಧಾನಸಭಾ ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕವಲೂರ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರ ಪರ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್, ಬಿಜೆಪಿ ಅವಧಿಯಲ್ಲಿ ಎಂದೂ ಕಾಣದಂತ ಅಭಿವೃದ್ಧಿ ಕಾರ್ಯ ಜರುಗಿವೆ. ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಆರ್ಥಿಕತೆಯಲ್ಲಿ ಬಲಿಷ್ಠ ರಾಷ್ಟ್ರವಾಗಿ ಭಾರತ ರೂಪುಗೊಂಡಿದೆ. ಎರಡು ಅವಧಿಯಲ್ಲಿ ಬಿಜೆಪಿ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಿದೆ ಎಂದರು.
ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮತದಾರರಿಗೆ ಬಿಜೆಪಿಯ ಸಾಧನೆ ತಿಳಿಸಬೇಕು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿ ಎನ್‌ಡಿಎ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರಿಗೆ ಮತ ನೀಡುವ ಮೂಲಕ ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಚಂದ್ರಶೇಖರ ಕವಲೂರು,ಈಶಪ್ಪ ಮಾದಿನೂರ,ನಾಗನಗೌಡ್ರು ಮಾಲಿಪಾಟೀಲ್,ನೀಲಕಂಠಯ್ಯ ಹಿರೇಮಠ್,ಶರಣಪ್ಪ ಜಡ್ಡಿ, ಸಿದ್ದಲಿಂಗಸ್ವಾಮಿ,ಬಸವರಾಜ ಗಡ್ಡಿ,ಪ್ರದೀಪಗೌಡ್ರು ಮಾಲಿಪಾಟೀಲ್,ಅಪಣ್ಣ ಪದಕಿ, ಹಾಗೂ ಎರಡು ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ಒಂದು ದಿನ ರಜೆ ಪಡೆಯದೇ ದೇಶದ ಅಭಿವೃದ್ಧಿ ಗೆ ಕೆಲಸ ಮಾಡಿದ್ದಾರೆ. ಜನರ ಜೀವನ ಮಟ್ಟ ಸುಧಾರಿಸಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ಕೊಪ್ಪಳ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಗೆ ಮತ ನೀಡಿ.
-ಹೇಮಲತಾ ನಾಯಕ, ವಿಧಾನ ಪರಿಷತ್ ಸದಸ್ಯೆ.

ಎನ್‌ಡಿಎ ಅಭ್ಯರ್ಥಿಯಾಗಿ ಡಾ. ಬಸವರಾಜ ಕ್ಯಾವಟರ್ ಸ್ಪರ್ಧಿಸಿದ್ದು, ಅವರನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿ ಮಾಡಬೇಕು.
-ಸುರೇಶ ಭೂಮರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷರು.

Get real time updates directly on you device, subscribe now.

Comments are closed.

error: Content is protected !!