ಪಿಯುಸಿ ಪರೀಕ್ಷೆ ಅತ್ಯುತ್ತಮ ಸಾಧನೆ ತೋರಿದ ವಿದ್ಯಾನಿಕೇತನ ಕಾಲೇಜ್
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದಲ್ಲಿ ಶ್ರೀ ವಿದ್ಯಾನಿಕೇತನ ಕಾಲೇಜ್ ಎಂದಿನಂತೆ ಅತ್ಯುತ್ತಮ ಸಾಧನೆ ತೋರಿದೆ.
ಒಟ್ಟು 620 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 450 ವಿದ್ಯಾರ್ಥಿಗಳು ಡಿಸ್ಟ್ರಿಕ್ಷನ್ ಹಾಗೂ 170 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಜಿಲ್ಲಾಮಟ್ಟದಲ್ಲಿ ಮೊದಲ ಸ್ಥಾನಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಕೊಪ್ಪಳದ ಜಿಲ್ಲೆಯ ಶ್ರೀ ವಿದ್ಯಾನಿಕೇತನ ಕಾಲೇಜ್ ತೋರಿದೆ.
ಕಾಮರ್ಸ್ ವಿಭಾಗದಲ್ಲಿ ಸಹ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆಯನ್ನು ಮೆರೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿಯ ನೆಕ್ಕಂಟಿ ಸೂರಿಬಾಬು, ಪ್ರಾಂಶುಪಾಲರು ಹಾಗೂ ಪೋಷಕರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
Comments are closed.