ಕುಷ್ಟಗಿ: ತೆಗ್ಗಿನ ಓಣಿ ದ್ಯಾಮಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷಿದ್ಧ
ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯಲ್ಲಿರುವ ಶ್ರೀ ದ್ಯಾಮಮ್ಮನ ಜಾತ್ರೆಯು ಸುಮಾರು 65 ವರ್ಷಗಳ ನಂತರ ಏಪ್ರಿಲ್ 09 ರಿಂದ 20 ರವರೆಗೆ ನಡೆಯಲಿದ್ದು, ಈ ಸಮಯದಲ್ಲಿ ಕೋಣ, ಟಗರು, ಕುರಿ, ಕೋಳಿಗಳನ್ನು ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಬಲಿ ಕೊಡುವುದನ್ನು ಹೈಕೋರ್ಟ್ ನಿರ್ದೇಶನದಂತೆ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಹಾಗೂ ಹೈಕೋರ್ಟ್ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕುಷ್ಟಗಿ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
Comments are closed.