ಕೊಪ್ಪಳದಲ್ಲಿ ಮೊದಲ ಮಳೆಯ ಸಿಂಚನ
Koppal : ಕಳೆದ ಒಂದುವರೆ- ಎರಡು ತಿಂಗಳಿಂದ ಬಿಸಿ ಗಾಳಿ ಹಾಗೂ ಉರಿಬಿಸಿಲಿಗೆ ಬೇಸತ್ತಿದ್ದ ಜನಕ್ಕೆ ಇಂದು ಒಂದು ಕ್ಷಣ ತಂಪೆರದ ಅನುಭವ. ಹೌದು ಕೊಪ್ಪಳದಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಹತ್ತರಿಂದ ಹದಿನೈದು ನಿಮಿಷ ಮಳೆ ಸುರಿಯಿತು. ಉರಿ ಬಿಸಿಲಿಗೆ ಬೇಸತ್ತಿದ್ದ ಜನ ಸ್ವಲ್ಪಮಟ್ಟಿಗೆ ತಂಪನ್ನು ಸಂಭ್ರಮಿಸಿದರು. ಕನಿಷ್ಠ ಒಂದೆರಡು ತಾಸು ಆದರೂ ಮಳೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಜನ ನಿರಾಸೆ ಅನುಭವಿಸಿದರು. 10 15 ನಿಮಿಷಗಳ ಮಳೆ ಮತ್ತಷ್ಟು ಅರೆ ಜಳವನ್ನು ಹೆಚ್ಚಿಸಲಿದೆ ಎನ್ನುವುದು ಜನರ ಆತಂಕ.
Comments are closed.