ಕೊಪ್ಪಳದಲ್ಲಿ ಮುಂದುವರೆದ ಪಕ್ಷಾಂತರ ಪರ್ವ :  ಸಿದ್ದೇಶ್ ಪೂಜಾರ, ಜಂಬಣ್ಣ ಸೇರಿದಂತೆ ಇತರರು ಕಾಂಗ್ರೆಸ್ ಸೇರ್ಪಡೆ

Get real time updates directly on you device, subscribe now.

ಕನ್ನಡ ನೆಟ್. ಕಾಂ ಸುದ್ದಿ

ಕೊಪ್ಪಳ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ವಲಸೆ ಮುಂದುವರೆದಿದೆ.

ಬಿಜೆಪಿ- ಜೆಡಿಎಸ್ ತೊರೆದು ಕೈ ಸೇರ್ಪಡೆ:

ಕೊಪ್ಪಳ ನಗರದಲ್ಲಿ ತಾಪಂ ಮಾಜಿ ಬಿಜೆಪಿ ಸದಸ್ಯ ಜಂಬಣ್ಣ ಜಂತಕಲ್, ವಕೀಲರಾದ ಆನಂದಹಳ್ಳಿ ಪ್ರಕಾಶ, ಎಸ್.ಎಂ. ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಬಸವರಾಜ ಭೋವಿ, ಬಿಜೆಪಿ ಜಿಲ್ಲಾ  ಮಾಜಿ ವಕ್ತಾರ ಬಸವಲಿಂಗಯ್ಯ ಗದಗಿನಮಠ, ಮುಖಂಡರಾದ ವೀರಯ್ಯ ಹುಲಿಗಿ ಮತ್ತು ಪರಶುರಾಮ ನಾಯಕ ಹುಲಿಗಿ ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

.

ಬಿಜೆಪಿ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ಸಿದ್ದೇಶ್ ಪೂಜಾರ, ಬಸವರಾಜ ಕರ್ಕಿಹಳ್ಳಿ, ಗೋಣಿಬಸಪ್ಪ ಕಟ್ಟಿಮನಿ, ಹನುಮಂತಪ್ಪ ಭೋವಿ, ವೀರೇಶ ಕನಕಗಿರಿ, ದೇವರಾಜ ಸಿಂದೋಗಿ, ಶಿವರಾಜ್ ಕರ್ಕಿಹಳ್ಳಿ, ನಂದೀಶ್ ಕರ್ಕಿಹಳ್ಳಿ, ವಿನಯ ಸಿಂದೋಗಿ, ರೇವಣ್ಣಸಿದ್ದಯ್ಯ ತಳಕಲ್ಲ, ಉಮೇಶ ಕರ್ಕಿಹಳ್ಳಿ ಸೇರಿದಂತೆ ಅನೇಕ ಮುಖಂಡರು ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಸಂದರ್ಧದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ, ಮುಖಂಡರಾದ ವೀರನಗೌಡ ಪಾಟೀಲ್, ಪ್ರಸನ್ನ ಗಡಾದ, ವೆಂಕಟೇಶ ಕಂಪಸಾಗರ, ಪಾಲಾಕ್ಷಪ್ಪ ಗುಂಗಾಡಿ, ವೈಜನಾಥ ದಿವಟರ್, ವಿರುಪಾಕ್ಷಯ್ಯ ಗದುಗಿನಮಠ, ವೀರಣ್ಣ ಗಾಣಿಗೇರ್, ಈರಣ್ಣ ಹುಲಿಗಿ, ಬಾಲಚಂದ್ರನ ಮುನಿರಬಾದ್, ಬಸವರಾಜ ಬೋವಿ, ಯಂಕಪ್ಪ ಹೊಸಳ್ಳಿ, ನಾಗರಾಜ ಪಟವಾರಿ, ಕನಕರಾಜ ಬುಳ್ಳಾಪುರ, ಕೃಷ್ಣ ಗಡಾದ, ಕಾವೇರಿ ರ‌್ಯಾಗಿ, ಪದ್ಮಾವತಿ ಕಂಬಳಿ, ಖಾಜವಲಿ ಹುಲಿಗಿ, ಅಶೋಕ ಹಿಟ್ನಾಳ ಸೇರಿದಂತೆ  ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕೊಪ್ಪಳ ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ತೊರೆದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

Get real time updates directly on you device, subscribe now.

Comments are closed.

error: Content is protected !!