ಏಪ್ರಿಲ್ 8ರ ಸಭೆಗೆ ಹೋಗಬೇಡಿ- ಇಕ್ಬಾಲ್ ಅನ್ಸಾರಿ ಸಂದೇಶ
ಗಂಗಾವತಿ : ಕಾಂಗ್ರೆಸ್ ಮುಖಂಡ ಎಚ್ ಆರ್ ಶ್ರೀನಾಥ್ ಮನೆಯಲ್ಲಿ ಸೋಮವಾರ ಏಪ್ರಿಲ್ 8ರಂದು ಲೋಕಸಭಾ ಚುನಾವಣೆಯ ನಿಮಿತ್ತ ಆಯೋಜಿಸಲಾಗಿರುವ ಸಭೆಯ ಕುರಿತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಕ್ರೋಶ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ತಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಸಭೆಗೆ ಹೋಗಬಾರದು ಎಂದು ಸಂದೇಶ ನೀಡಿದ್ದಾರೆ .
ಈ ಕುರಿತು ಇಕ್ಬಾಲ್ ಅನ್ಸಾರಿ ಅವರು ಹೇಳಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ ಇದರಲ್ಲಿ ಎಚ್ಆರ್ ಶ್ರೀನಾಥ್ ಮಾಜಿ ಮಲ್ಲಿಕಾರ್ಜುನ್ ನಾಗಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮಿಧ್ ಮಣಿಯಾರ್, ಆಸಿಫ್ ಕೌನ್ ಹನುಮಂತಪ್ಪ ಅರಸನಕೆರಿ ಹಾಗೂ ದೇವರ ಮನೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಇಕ್ಬಾಲ್ ಅನ್ಸಾರಿ ಈ ಇಂದಿನ ಎಂಎಲ್ಎ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿಲ್ಲ. ಯಾವುದೇ ಕಾರಣಕ್ಕೂ ಇವರ ಮಾತಿಗೆ ಮರುಳಾಗಬಾರದು ಯಾರು ಈ ಸಭೆಗೆ ಹಾಜರಾಗಬಾರದು ಎಂದು ಸಂದೇಶ ನೀಡಿದ್ದಾರೆ.
ಇದು ಕೆ ಆರ್ ಪಿ ಪಿ ಮುಖಂಡರ ಹಾಗೂ ಜನಾರ್ಧನ್ ರೆಡ್ಡಿ ಬೆಂಬಲಿಗರ ಸಭೆ ಯಾಗಿದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಬಾರದು ಎಂದು ಇದರಲ್ಲಿ ವಿನಂತಿಸಿಕೊಂಡಿದ್ದಾರೆ.
Comments are closed.