ಕೊಪ್ಪಳ BT ಪಾಟೀಲ್ ನಗರದ ನಿವಾಸಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ
ನಗರದ ನಿವಾಸಿಗಳು ಉತ್ಸಾಹದಿಂದ ತಪ್ಪದೇ ಮತ ಚಲಾಯಿಸಿ ನಗರದ ಮತದಾನ ಪ್ರಮಾಣ ಹೆಚ್ಚಿಸಿ – ರಾಹುಲ್ ರತ್ನಂ ಪಾಂಡೇಯ
ಈ ಬಾರಿ ಮೇ ೦7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ ಅವರು ತಿಳಿಸಿದರು.
ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ *64-ಕೊಪ್ಪಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 133-149-150-151-153 ಮತಗಟ್ಟೆಗಳ ವ್ಯಾಪ್ತಿಗೆ ಬರುವ BT ಪಾಟೀಲ್ ನಗರದ ಜನರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರು, ಹೊಸ ಮತದಾರರು, ಹಿರಿಯ ನಾಗರಿಕರು, ಮಹಿಳೆಯರು ವಿಶೇಷ ಚೇತನರಿಗೆ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ,ವೀಲಚೇರ್,ರಾಂಪ್ ಶೌಚಾಲಯ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ನಗರ ನಿವಾಸಿಗಳು ನಿಮ್ಮ ಮತದಾನ ಜಾಗೃತಿಯೊಂದಿಗೆ ನಿಮ್ಮ ಮನೆಯ ಸುತ್ತಲಿನ ನಾಗರಿಕರಿಗೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಮತದಾನ ಪ್ರಮಾಣ ಹೆಚ್ಚಿಸಿ ದಾಖಲೆ ಬರೆಯಲು ಕಾರಣೀಭೂತರಾಗಲೂ ನಗರ ನಿವಾಸಿಗಳಿಗೆ ಅವರು ಪ್ರೋತ್ಸಾಹಿಸಿದರು.
ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ ಎಂದು ನಗರಸಭೆಯ ಆಯುಕ್ತಾರದ ಗಣಪತಿ ಪಾಟೀಲ್ ಅವರು ಮತದಾರರಿಗೆ ಜಾಗೃತಿ ಮೂಡಿಸಿದರು.
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಎಲ್ಲರಿಗೂ ಮತದಾನದ ಹಕ್ಕಿದೆ. ದೇಶದ ಭವಿಷ್ಯಕ್ಕಾಗಿ ನಿಮ್ಮದೊಂದು ಮತ ಅತ್ಯಅಮೂಲ್ಯವಾದ್ದು, ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರ ಮತ ಅತ್ಯಮೂಲ್ಯವಾದದ್ದು, ಮತದಾರರು ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಿ ನಗರದಲ್ಲಿ ಮತದಾನ ಪ್ರಮಾಣ ಪ್ರತಿಶತ ಹೆಚ್ಚಿಸುವಂತೆ ನಗರದ ಹಿರಿಯ ನಾಗರಿಕರಾದ ಸುರೇಶ ನಾಡಗೇರ ರವರು BT ಪಾಟೀಲ್ ನಗರದ ಸ್ಥಳೀಯ ನಿವಾಸಿಗಳಿಗೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನಿವೃತ್ತ ನೌಕರು, ಹಿರಿಯ ನಾಗರಿಕರು,ಮಹಿಳೆಯರು, ಯುವ-ಮತದಾರರು,ವಿಶೇಷ ಚೇತನರು & ನಗರ ಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments are closed.