ವಿಜೃಂಭಣೆಯಿಂದ ನಡೆದ ಕುಷ್ಟಗಿ ಶ್ರೀಗುರು ಮದ್ದಾನೇಶ್ವರ ಜಾತ್ರಾಮಹೋತ್ಸವ

Get real time updates directly on you device, subscribe now.


ಕುಷ್ಟಗಿ.ಏ.03; ಪಟ್ಟಣದ ಆರಾಧ್ಯ ದೈವ ಶ್ರೀ ಶ್ರೀಗುರು ಮದ್ದಾನೇಶ್ವರ ಜಾತ್ರಾಮಹೋತ್ಸವ,  ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳವರ  50ನೇಯ ಪುಣ್ಯಸ್ಮರಣೋತ್ಸವ ಹಾಗೂ  ಲಿಂ.ಶ್ರೀ ಷ.ಬ್ರ. ಕರಿಬಸವ ಚರಮೂರ್ತಿಗಳವರ 37ನೇ ಪುಣ್ಯರಾಧನೆ,  ಶ್ರೀ ಷ.ಬ್ರ. 108 ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳವರ 23 ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ,
ಸಾಮೂಹಿಕ ವಿವಾಹ, 108 ಸುಮಂಗಲಿಯರಿಗೆ ಉಡಿ ತುಂಬುವದು, ತುಲಾಭಾರ, ಇಷ್ಟಲಿಂಗಧಾರಣ ಹಾಗೂ ಶ್ರೀಮಠದ ಮಹಾ ರಥೋತ್ಸವ ಧಾರ್ಮಿಕ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಮಾ.26 ಮಂಗಳವಾರದಿಂದ ಏ. 03 ಬುಧವಾರದವರೆಗೂ ಶ್ರೀಗುರು ಮದ್ದಾನೇಶ್ವರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ನಾಲತವಾಡ ವಿರೇಶ್ವರ ಶರಣರ ಜೀವನ ದರ್ಶನ ಪ್ರವಚನ ಮಹಾ ಮಂಗಲಗೊಂಡಿತು. ಏ.03 ಬುಧವಾರ ಬೆಳಿಗ್ಗೆ 7:15ಕ್ಕೆ ಪಂಚಾಚಾರ್ಯ ಧ್ವಜಾರೋಹಣ, ಅಯ್ಯಾಚಾರ, ಲಿಂಗದೀಕ್ಷ, ಅಕ್ಕನ ಬಹಗದವರಿಂದ ಕುಂಭಮೇಳ ಹಾಗೂ ಡೊಳ್ಳು, ಭಜನೆ ಕೋಲಾಟ, ಕಳಸಗಳೊಂದಿಗೆ ಓಂಕಾರ ಬೆನೂರಿನ ಸಿದ್ದ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ವಿವಿಧ ಗ್ರಾಮದ ಆರು ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ನೂರಾರು ಭಕ್ತರ ಮದ್ಯೆ ಮಹಾ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಎಂ.ಗೂಡದೂರಿನ ನೀಲಕಂಠಯ್ಯ ತಾತನವರು, ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯರು, ನಿಡಶೇಸಿಯ ಅಭಿನವ ಕರಿಬಸವ ಶಿವಾಚಾರ್ಯರು ಮತ್ತು ಕುಷ್ಟಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!