ಕಗ್ಗತ್ತಲೆಯ ದಾರಿಯ ಮಹಾ ಚೇತನ ನಾಟಕ

0

Get real time updates directly on you device, subscribe now.

Kannadanet ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಸಂತೆ ಬಜಾರ್ ನಲ್ಲಿ ಅಂಗಳ ಟ್ರಸ್ಟ್ ಹಾಗೂ ವಿಸ್ತಾರ ರಂಗ ಶಾಲೆಯ ಸಹಭಾಗಿತ್ವದಲ್ಲಿ ಅಕ್ಷರದವ್ವ ಮಾತೆ ಸಾವಿತ್ರಿ ಬಾ ಪುಲೆ ಹಾಗೂ ಜ್ಯೋತಿ ಬಾ ಪುಲೆ ದಂಪತಿಗಳ ಜೀವನಾಧಾರಿತ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಈ ಒಂದು ನಾಟಕದ ಉದ್ಘಾಟನಾ ಸಮಾರಂಭ ವನ್ನು ಚಿಕ್ಕ ವೇದಿಕೆ ಕಾರ್ಯಕ್ರಮದ ಮೂಲಕ  ಪ್ರಾರಂಭಿಸಲಾಯಿತು. ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದ ಉದ್ದೇಶಿಸಿ ಶ್ರಿಮತಿ ಪುಷ್ಪಾ ಅವರು ಮಾತನಾಡಿ ಅಂಗಳ ಸಂಸ್ಥೆಯ ಮೂಲಕ ಜ್ಯೋತಿ ಅವರು ನಮ್ಮೂರಿ ನಲ್ಲಿ ಸುಮಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ.ಈ ಒಂದು ನಾಟಕವನ್ನು ನಮ್ಮೂರಿನ ಮಹಿಳೆಯರು ಅಷ್ಟೆ ಅಲ್ಲದೆ ಪ್ರತಿಯೊಂದು ವ್ಯಕ್ತಿ ನೋಡಬೇಕು ಎಂಬ ಅಭಿಪ್ರಾಯ ಜನಕ್ಕೆ ಹೇಳಿದರು.ನಂತರ ವಿಸ್ತಾರ ರಂಗ ನಿರ್ದೇಶಕಿ ರೇವತಿ ಕುಂದನಾಡು ಮಾತನಾಡಿ ಸುಮಾರು 30 ವರ್ಷಗಳಿಂದ ವಿಸ್ತಾರ ಕೆಲಸ ಮಾಡುತ್ತಾ ಬಂದಿದೆ 7 ವರ್ಷದಿಂದ ರಂಗಶಾಲೆ ಪ್ರಾರಂಬಿಸಿದರು ಈಗಲೂ 5 ತಿಂಗಳ ರಂಗ ತರಬೇತಿ ನೀಡಲಾಗುತ್ತದೆ ನಂತರ ನಾಟಕ ಪ್ರದರ್ಶನ ಮಾಡಲಾಗುತ್ತದೆ ಎಂದು ಹೇಳಿದರು. ರಂಗಶಾಲೆಯ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಲಾಯಿತು. ಈ ಒಂದು ನಾಟಕದಲ್ಲಿ ಸಾವಿತ್ರಿ ಬಾ ಪುಲೆ ಹಾಗೂ ಜ್ಯೋತಿ ಬಾ ಪುಲೆ ಅವರ ಜೀವನ ಚರಿತ್ರೆ ಕುರಿತು ನೋಡುವಾಗ ಜನರಿಗೆ ಕೆಲವು ಸನ್ನಿವೇಶಗಳು ಮನಮುಟ್ಟುವಂತಿದ್ದವು ನಾಟಕ ನೋಡಿದ ನಂತರ ಜ‌ರು ತಮ್ಮ ಅಭಿಪ್ರಾಯಗಳನ್ನು ನಾಟಕದ ಕುರಿತು ಹಂಚಿಕೊಂಡರು ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ಲಕ್ಮೀ ಇಟಗಿ ಅವರು ಮಾಡಿದರು ಜ್ಯೋತಿ ಹಿಟ್ನಾಳವರು ಪ್ರಾಸ್ತಾವಿಕ ಮಾತುಗಳನ್ನು ಹಾಡಿದರು ಈ ಒಂದು ಸಂದರ್ಭದಲ್ಲಿ ವಿಸ್ತಾರನ ನಿರ್ದೇಶಕ ರಾದ ನಾಜರ್ ಎಸ್.ಧರ್ಮ ರಾಜ ಗೋನಾಳ ,ಗೌರಿ,ಹುಲಗಪ್ಪ ,ಸುಂಕಪ್ಪ ಮೀಸಿ.ಕರಿಯಪ್ಪ ಸಂಜೀವ,ಅಂಗಳ ಟ್ರಸ್ಟನ್ ಶಂಕರ್ ಹಾಗೂ ನಾಗರತ್ನ ಇನ್ನೂ ಮುಂಯಾದವರು ಪಾಲ್ಗೊಂಡಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: