ಇತಿಹಾಸದ ಸತ್ಯ ತಿಳಿಸುವುದು ಇತಿಹಾಸ ತಜ್ಞರ ಜವಾಬ್ದಾರಿ- ಶರಣಪ್ಪ ಉಮಚಗಿ

Get real time updates directly on you device, subscribe now.

ಕೊಪ್ಪಳ :

ಇತಿಹಾಸ ಬಗೆದಷ್ಟು ಆಳ ಮೊಗೆದಷ್ಟು ಸಿಹಿ ಆಗಿದೆ, ಕಂಡು ಕಾಣದ ಸತ್ಯವನ್ನು ಭವಿಷ್ಯಕ್ಕೆ ತೋರಿಸುವುದು ಇತಿಹಾಸ ತಜ್ಞರ ಜವಾಬ್ದಾರಿಯಾಗಿದೆ ಅದರಲ್ಲೂ ಕಲ್ಯಾಣ ಕರ್ನಾಟಕದ ವಿಮೋಚನ ಹೋರಾಟ ಅಸಾಮಾನ್ಯವಾದದ್ದನ್ನು ಪ್ರತಿಯೊಬ್ಬರು ತಿಳಿಬೇಕಾ ಗಿದೆ ಎಂದು ಇತಿಹಾಸ ಸಂಶೋಧಕರಾದ ಶರಣಪ್ಪ ಉಮಚಗಿಯವರು ಅಭಿಪ್ರಾಯ ಪಟ್ಟಿದ್ದಾರೆ. ನಗರದ ಶ್ರೀ ಗವಿಸಿದ್ದೇಶ್ವರ ಪದವಿ ವಿದ್ಯಾಲಯ ದಲ್ಲಿ  ಇತಿಹಾಸ ವಿಭಾಗ ಮತ್ತು ಐತಿಹಾಸಿಕ ಪರಂಪರಾ ವೇದಿಕೆಯ ಸಹಯೋಗದಲ್ಲಿ ಆಯೋಜನೆಗೊಂಡ ವಿಶೇಷ ಉಪನ್ಯಾಸ ‘ಕಲ್ಯಾಣ್ ಕರ್ನಾಟಕದ ವಿಮೋಚನ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಪಾತ್ರ’ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಲ್ಯಾಣ ಕರ್ನಾಟಕದ ವಿಮೋಚನೆಯಲ್ಲಿ ಕೊಪ್ಪಳದ ಕೊಡುಗೆ ಅಪಾರವಾಗಿದೆ ಬಸರಹಳ್ಳಿಯ ರಾಮವ್ವ 90 ವರ್ಷದ ಇವರು ಜೋಗತಿ ವೇಷದಲ್ಲಿ ನಿಜಾಮರ ವಿರುದ್ಧ ಹೋರಾಡಿದವರು, ಶಿರೂರು ವೀರಭದ್ರ ಸ್ವಾಮಿಯವರು, ತಲಕಲ್ಲ, ಬನ್ನಿಕೊಪ್ಪ ಸೇರಿದಂತೆ ಅನೇಕ ಹಳ್ಳಿಗಳ ಅಕ್ಷರಸ್ಥ ಮತ್ತು ಅನಕ್ಷರಸ್ಥ ಜನರು ಕಲ್ಯಾಣ ಕರ್ನಾಟಕ ವಿಮೋಚನ ಹೋರಾಟದಲ್ಲಿ ಭಾಗಿಯಾಗಿ ಬದುಕು ಅರ್ಪಿಸಿದ್ದನ್ನ ನಾವು ಸ್ಮರಿಸಬೇಕೆಂದು ತಿಳಿ ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಚನ್ನಬಸವ ಅವರು ಅಧ್ಯಕ್ಷ ನುಡಿಗಳನ್ನಾಡಿದರು, ವಿಭಾಗದ ಮುಖ್ಯಸ್ಥರಾದ ಡಾ. ರಾಜು ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು, ಉಪನ್ಯಾಸಕರಾದ ಸೋಮಶೇಖರ್ ಸ್ವಾಗತಿಸಿದರು ಕು. ವಿಶಾಲಾಕ್ಷಿ ಪ್ರಾರ್ಥಿಸಿದರು ಕು. ಲಲಿತ ವಂದಿಸಿದರು ಕು.ಭರತ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!