ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆಯಬೇಕಾದ್ರೆ ರಾಜಶೇಖರ ಹಿಟ್ನಾಳ ಗೆಲ್ಲಬೇಕು- ಇಕ್ಬಾಲ್ ಅನ್ಸಾರಿ
ಗಂಗಾವತಿ : ಇವತ್ತಿನ ಈ ಸಭೆ, ಗಂಗಾವತಿಯಲ್ಲಿ ಮಹತ್ವದ ಸಭೆ ಇದು.ನಾನು ಸಿಎಂ ಸಿದ್ದರಾಮಯ್ಯನವರ ಬಳಿ ಹೋಗಿದ್ದೆ.ವಿಧಾನಸಭಾ ಚುನಾವಣೆಯಲ್ಲಿ ಬಹಳಷ್ಟು ತಪ್ಪುಗಳು ಆಗಿವ. ಅದು ನನ್ನಿಂದ, ಕಾರ್ಯಕರ್ತರಿಂದಲೂ ಆಗಿಲ್ಲ.ನಮ್ಮ ಪಕ್ಷದ ಕೆಲ ನಾಯಕರು, ಬೇರೆ ಪಕ್ಷದ ಜೊತೆ ಡೀಲ್ ಆಗಿ ಕೆಲಸ ಮಾಡಿದ್ದಾರೆ.ಅವರು ಇಂದು ಈ ಸಭೆಗೆ ಬಂದಿಲ್ಲ
ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು ಗಂಗಾವತಿಯ ಅವರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರುಗಂ
ಪರೋಕ್ಷವಾಗಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಹೆಚ್.ಆರ್ ಶ್ರೀನಾಥ್ ವಿರುದ್ದ ವಾಗ್ದಾಳಿ.ಮೊದಲು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಡೀಲ್ ಆಗಿದ್ದಾನೆ.ಯುವ ಘಟಕ ಅಧ್ಯಕ್ಷ ಅಸೀಫ್ ಸಹ ಆಗಿದ್ದಾನೆ
ಜನಾರ್ದನರೆಡ್ಡಿ ಅಕ್ರಮದ ಹಣ ತಂದು ಓಣಿ ಓಣಿಗೆ ಹೋಗಿ ಹಣ ಹಂಚಿದ್ದಾರೆ. ನಗರಸಭೆ ಸದಸ್ಯರು ಸಹ ಭೀಕ್ಷಕರಾಗಿ ಜನಾರ್ದನರೆಡ್ಡಿ ಜೊತೆ ಹೋಗಿದ್ದಾರೆ. ದುಡ್ಡು ಕೊಡ್ತಾರೆ ಅಂತಾ ಜನಾರ್ದನರೆಡ್ಡಿ ಜೊತೆ ಹೋಗಿದ್ದಾರೆ.ನಾನು ಸೋತ ಮೇಲೆ, ಕೆಲ ಗಿರಾಕಿಗಳು ಡಮ್ಮಿ ಆಗಿ ಕೆಲಸ ಮಾಡಿದ್ದಾರೆ.ನಾನೇ ಬೆಳಸಿದ ಕೆಲವರು ಇಂದು ಡಮ್ಮಿ ಆಗಿದ್ದಾರೆ.ಇದೀಗ ಇವರೇ ನನ್ನ ವಿರುದ್ದ ಪುಸ್ತಕ ರೆಡಿ ಮಾಡಿದ್ದಾರೆ.ನಾನು ಹೊರಗಡೆ ಬಾರದೇ 58 ಸಾವಿರ ಓಟು ಬರ್ತಾವಾ..?
ನನ್ನ ಮೇಲೆ ಸುಳ್ಳು ಹೇಳುವುದಕ್ಕೆ ಜನಾರ್ದನರೆಡ್ಡಿ ಜೊತೆ ಡೀಲ್ ಆಗಿದ್ದಾರೆ.ಕೆಲವರು ನನಗೆ ಸಂಪ್ರದಾಯಕ ಶತ್ರುಗಳು ಇದ್ದಾರೆ.ಅವರು ಬೇರೆ ಪಕ್ಷದಿಂದ ಡೀಲ್ ಮಾಡ್ತಿದ್ದಾರೆ.ಅವರು ಕಾಂಗ್ರೆಸ್ ನ ವಿರೋಧಿಗಳು.ಇವರೇಲ್ಲಾ ಕಾಂಗ್ರೆಸ್ಗೆ ಮೂಲ ಇದ್ದಂತೆ.ಪರೋಕ್ಷವಾಗಿ ಕೆಲ ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ಹೊರ ಹಾಕಿದ ಇಕ್ಬಾಲ್ ಅನ್ಸಾರಿ.
ಆರ್.ಎಸ್.ಎಸ್ ನ ಏನಾದ್ರೂ ಸಭೆ ನಡೆದ್ರೆ ಅದು ಕಾಂಗ್ರೆಸ್ ವಿರೋಧಿ ಕಾಂಗ್ರೆಸ್ ನಾಯಕರ ಮನೆಯಲ್ಲಿ ಅವರು ಮುಸ್ಲಿಂ ವಿರೋಧಿಗಳಾಗಿದ್ದಾರೆ.ನಿಮ್ಮಪ್ಪನ್ನು ನಾವು ಎಂಪಿ ಮಾಡಿದ್ದೇನೆ.ನಿಮಗೆ ತಾಕತ್ತು ಇದ್ರೆ, ಎಂಪಿ ಚುನಾವಣೆಗೆ ಬನ್ನಿ ಎಂದ ಇಕ್ಬಾಲ್.ಕಾಂಗ್ರೆಸ್ ಮಾಜಿ ಎಂಎಲ್ಸಿ ವಿರುದ್ದ ಇಕ್ಬಾಲ್ ಅನ್ಸಾರಿ ವಾಗ್ದಾಳಿ.ಆವಾಗ ಗಂಗಾವತಿಯಲ್ಲಿ ಒಂದೇ ಮಠ( ಶ್ರೀರಾಮುಲು) ಇತ್ತು.ಇದೀಗ ಶಾಖಾ ಮಠಗಳಾಗಿವೆ ಇದರಿಂದ ಅವರಿಗೆ ಏನು ಮಾಡೋಕೆ ಆಗಲ್ಲ.ಇಕ್ಬಾಲ್ ಅನ್ಸಾರಿಯನ್ನು ಮನೆಯನ್ನು ಹೊಡೆದವರು ಇವರೇ.ನಮ್ಮ ತಮ್ಮರನ್ನು ಗುಲಾಮರಾನ್ನಾಗಿ ಮಾಡಿಕೊಂಡಿದ್ದಾರೆ.
ನನ್ನ ನೋವನ್ನು ಸಿದ್ದರಾಮಯ್ಯನವರತ್ತ ಹೇಳಿಕೊಂಡಿದ್ದೇನೆ ನಾನು ಸೋತಿದ್ದಕ್ಕೆ ಬೇಸರ ಇಲ್ಲ, ಆದ್ರೆ ನಮ್ಮ ನಾಯಕರು ಸೋಲಿಸಿದ್ದ ತಕ್ಕ ಬೇಸರ ಇದೆ.ಒಂದು ಗಂಟೆಗಳ ಕಾಲ ಸಿದ್ದರಾಮಯ್ಯನವರು ಚರ್ಚೆ ಮಾಡಿದ್ದಾರೆ.
ಕಾಂಗ್ರೆಸ್ ಮುಖವಾಡ ಹಾಕಿಕೊಂಡು ವರು, ಇದೀಗ ಕೆ.ಆರ್.ಪಿಪಿ ಪಕ್ಷದ ಪರ ಕೆಲಸ ಮಾಡಿದ್ದಾರೆಂದು ಹೇಳಿದ್ದೇನೆ. ಸಿದ್ದರಾಮಯ್ಯನವರು ನಿನಗೆ ಅನ್ಯಾಯವಾಗೋದಕ್ಕೆ ಬಿಡೋದಿಲ್ಲ ಎಂದಿದ್ದಾರೆ.
ಚುನಾವಣೆ ನಂತರ ಮತ್ತೆ ಕುಳಿತು ಚರ್ಚೆ ಮಾಡೋಣ ಎಂದ್ರು.ಎಂಪಿ ಚುನಾವಣೆ ಏನು ಮಾಡ್ತೀರಾ ಅಂದ್ರು.
ನಾನು ನಿನ್ನ ಬೆಂಬಲಿಗ, ನೀವು ಹೇಳಿದ ಹಾಗೇ ಕೇಳ್ತೀನಿ ಎಂದೆ. ನೀವು ರಾಜಕೀಯ ಬಿಟ್ರೆ, ನಾನು ರಾಜಕೀಯ ಬಿಡ್ತೀವಿ ಎಂದಿದ್ದೇನೆ.ಮುಸ್ಲಿಂ ಸಮುದಾಯಕ್ಕೆ ನೀವೇ ನಾಯಕ ಎಂದು ನಾನು ಪ್ರಸ್ತಾಪ ಮಾಡಿದ್ದೇನೆ.ನನಗೆ ಎಂಎಲ್ಸಿ, ನಿಗಮ ಏನು ಬೇಡ ಎಂದಿದ್ದೇನೆ ಎಂದ ಇಕ್ಬಾಲ್ ಅನ್ಸಾರಿಖಂಡಿತವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತೀನಿ ಎಂದಿದ್ದೇನೆ
ಬೇರೆಯವರ ನಾನು ತರಹ ಮ್ಯಾಚ್ ಫಿಕ್ಸಿಂಗ್ ಮಾಡೋಲ್ಲ. ಬಿಜೆಪಿ ಅಭ್ಯರ್ಥಿ ನನ್ನನ್ನು ಭೇಟಿ ಮಾಡೋಕೆ ಸಂಪರ್ಕ ಮಾಡಿದ್ರು
ಆದ್ರೆ, ನಾನು ಯಾವುದೇ ಕಾರಣಕ್ಕೂ ಬರಬೇಡಿ, ನಾನು ಕಾಂಗ್ರೆಸ್ ಎಂದಿದ್ದೇನೆ.
ಇಷ್ಟು ನಿಷ್ಠೆ ನನ್ನಲ್ಲಿದೆ ಎಂದು ಇಕ್ಬಾಲ್ ಅನ್ಸಾರಿ.
ಹೆಚ್.ಆರ್ ಶ್ರೀನಾಥ್ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡೋದಿಲ್ಲ.ಅವರಿಗೆ ಹೋಗಿ ಯಾಕೆ ನಮಸ್ಕಾರ ಹಾಕ್ತೀರಾ ಎಂದ ಅನ್ಸಾರಿ.ನಾನು ಸಿದ್ದರಾಮಯ್ಯನವರ ಸಲುವಾಗಿ ಖಂಡಿತವಾಗಿ ಕೆಲಸ ಮಾಡ್ತೀನಿ. ನನ್ನನ್ನು ನೀವು ನಂಬಿ, ಗೆಲ್ಲಸಿಕೊಂಡು ಬರ್ತೀನಿ. ಗೆದ್ದ ಮೇಲೆ ನಾವು ಹೇಳಿದ ಕೆಲಸ ಮಾಡಿ, ಆದ್ರೆ ಬಿಜೆಪಿಯವರ ಕೆಲಸ ಮಾಡಬೇಡಿ ಎಂದ ಅನ್ಸಾರಿ. ನಿಮ್ಮ ಸಲುವಾಗಿ ನಾನು ಕೆಲಸ ಮಾಡ್ತೀನಿ ಆದ್ರೆ ಇಷ್ಟಾದಾ ಮೇಲೆ ನೀವು ಮರೆತರೇ ಹೇಗೆ.. ವಿಧಾನಸಭಾ ಚುನಾವಣೆಯಲ್ಲಿ ನನಗೆ ಅನ್ಯಾಯ ಮಾಡಿದ್ದು ಗೊತ್ತಿದೆ ಆದ್ರೆ, ಅನ್ಯಾಯವನ್ನು ನಾನು ಮರೆತಿದ್ದೇನೆ ಮುಂದೆ ಅನ್ಯಾಯವಾದ್ರೆ, ನನ್ನ ಸಹನೆ ಪರೀಕ್ಷೆ ಮಾಡಿದ್ದಂತೆಬೇರೆಯವರ ಮನೆಗೆ ಹೋಗಬೇಕಾದ್ರೆ, ನನ್ನ ಗಮನಕ್ಕೆ ತನ್ನಿ ಎಂದ ಇಕ್ಬಾಲ್ ಅನ್ಸಾರಿ
ಕೊಪ್ಪಳದಲ್ಲಿ ರಾಜಶೇಖರ ಹಿಟ್ನಾಳ ಗೆಲ್ಲಬೇಕು.
ಅವರು ಗೆದ್ರೆ ಮಾತ್ರ ಸಿದ್ದರಾಮಯ್ಯ ನವರು ಸಿಎಂ ಆಗಿ ಮುಂದುವರೆಯುತ್ತಾರೆ.ಸಿಎಂ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆಯಬೇಕಾದ್ರೆ, ರಾಜಶೇಖರ ಹಿಟ್ನಾಳ ಗೆಲ್ಲಬೇಕು ಎಂದ ಇಕ್ಬಾಲ್ ಅನ್ಸಾರಿ. ಸಿಎಂ ಸ್ಥಾನದ ಗುಟ್ಟು ಬಿಟ್ಟುಕೊಟ್ಟ ಇಕ್ಬಾಲ್ ಅನ್ಸಾರಿ
ಲೋಕಸಭಾ ಚುನಾವಣೆಯ ಸಿಎಂಗೆ ನಿರ್ಣಾಯಕ ಎಂದ ಇಕ್ಬಾಲ್ ಅನ್ಸಾರಿ.
ಜನಾರ್ದನರೆಡ್ಡಿಯನ್ನು ಜನ ಬೆಂಬಲಿಸಿ ಮತ ಹಾಕಿಲ್ಲ. ಜನಾರ್ದನರೆಡ್ಡಿಗೆ ಯಾವುದೇ ಓಟು ಬ್ಯಾಂಕ್ ಇಲ್ಲ. ಜನಾರ್ದನರೆಡ್ಡಿ ತೆಗೆದುಕೊಂಡಿದ್ದು, ಬಿಜೆಪಿ ಮತಗಳು ಹಾಗೂ ದುಡ್ಡು ಕೊಟ್ಟು ಖರೀದಿ ಮಾಡಿದ ಮತಗಳು. ಗಂಗಾವತಿ ಜನರ ನಾಡಿಮಿಡಿತ ನನಗೆ ಗೊತ್ತಿದೆ ಕಾಂಗ್ರೆಸ್ಗೆ ಯಾವ ರೀತಿ ಲೀಡ್ ಕೊಡಬೇಕು ಎಂದು ನನಗೆ ಗೊತ್ತು.ಅಂಜನಾದ್ರಿಗೆ ಅನುದಾನ ತಂದಿದ್ದು ಜನಾರ್ದನರೆಡ್ಡಿ ಅಲ್ಲ.ಬದಲಾಗಿ, ಸಿದ್ದರಾಮಯ್ಯ, ಸಚಿವ ತಂಗಡಗಿ ಕೊಡಿಸಿದ್ದಾರೆ. ಬಿಜೆಪಿಗೆ ಜನಾರ್ದನರೆಡ್ಡಿ ಕಂಡಿಷನ್ ಹಾಕಿದ್ದಾರೆ. ನನ್ನ ಕೇಸ್ ಖುಲಾಸೆ ಮಾಡಿ ಅಂತಾ ಅಮಿತ್ ಶಾ ಗೆ ಕೇಳಿ ಬಿಜೆಪಿಗೆ ಜನಾರ್ದನರೆಡ್ಡಿ ಸೇರ್ಪಡೆ ಆಗಿದ್ದಾರೆ.
ಜನಾರ್ದನರೆಡ್ಡಿ ಐಪಿಎಲ್ ಸ್ಟಾರ್ ಅಲ್ಲ, ಬರೀ ಝೀರೋ. ಜನಾರ್ದನರೆಡ್ಡಿ ದಬ್ಬಾಳಿಕೆ ಗಂಗಾವತಿಯಲ್ಲಿ ಇಲ್ಲಿ ನಡೆಯೋಲ್ಲ.ಬಳ್ಳಾರಿಯ ದಬ್ಬಾಳಿಕೆ ಇಲ್ಲಿ ನಡೆಯೋದಿಲ್ಲ.
ರಾಜಶೇಖರ ಹಿಟ್ನಾಳ ಅವರೇ, ಸಿದ್ದರಾಮಯ್ಯನವರ ಪ್ರೀತಿಗೋಸ್ಕರ ಚುನಾವಣೆ ಮಾಡಿದ್ದೀವಿ. ಇದನ್ನು ನೀವು ಮರೆಯಬಾರದು ಎಂದು ಹೇಳಿದರು ಈ ಸಂದರ್ಭದಲ್ಲಿ ಡಿಸಿಸಿ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಸಚಿವ ಶಿವರಾಜ್ ಸಂಗಡಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್ ಅಭ್ಯರ್ಥಿ ಇತರ ನಾಯಕರು ಉಪಸ್ಥಿತರಿದ್ದರು.
Comments are closed.