Get real time updates directly on you device, subscribe now.
ಕೊಪ್ಪಳ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಶೋಕಾಚರಣೆಯನ್ನು ಮಾಡಲಾಯಿತು.
ಮನಮೋಹನ್ ಸಿಂಗ್ ಅವರು ಭಾರತವನ್ನು ಅಪಾರ ಬುದ್ಧಿವಂತಿಕೆ ಮತ್ತು ಸಮಗ್ರತೆಯಿಂದ ಮುನ್ನಡೆಸಿದರು ಹಾಗೂ ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ತಿಳಿವಳಿಕೆಯು ರಾಷ್ಟ್ರವನ್ನು ಪ್ರೇರೇಪಿಸಿತು.ಕ್ರಿಯಾಶೀಲ ವ್ಯಕ್ತಿ, ರಾಷ್ಟ್ರ ನಿರ್ಮಾಣಕ್ಕೆ ಅವರ ಅಪಾರ ಕೊಡುಗೆ ಭಾರತೀಯ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಕುಲಪತಿ ಪ್ರೊ. ಬಿ.ಕೆ.ರವಿ ಸಂತಾಪ ವ್ಯಕ್ತಪಡಿಸಿರುವ.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವಟ್ಟಿ ಮತ್ತು ಅಧ್ಯಾಪಕರಾದ ಜಡೆಯಪ್ಪ
ಪ್ರವೀಣ ಪೊಲೀಸ್ ಪಾಟೀಲ್, ಜಗದೀಶ್, ಕುಮಾರನಾಯಕ್,ಅಲ್ತಾಪ ,ಅಯ್ಯಪ್ಪ,ಸಂತೋಷಕುಮಾರ,ಪಾರ್ವತಿ, ವಿರೂಪಾಕ್ಷ,ಶ್ರೀಕಂತ್, ಸುಧಾಕರ್, ಸೇರಿದಂತೆ ಇತರರು ಇದ್ದರು.