ಬಿಜಕಲ್ ಗ್ರಾಮದಲ್ಲಿ ಮತದಾನದ ಜಾಗೃತಿ ಬೆಳಕು

Get real time updates directly on you device, subscribe now.

: ಬಿಜಕಲ್ ಗ್ರಾಮ ಪಂಚಾಯತಿ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪಂಜಿನ ಮೆರವಣಿಗೆ ಮೂಲಕ ಜಾಗೃತಿ ಜಾಥಾಕ್ಕೆ ಕುಷ್ಟಗಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಿಂಗಪ್ಪ ಎಸ್ ಮಸಳಿ ಅವರು ಚಾಲನೆ ನೀಡಿದರು.

      ಸೂರ್ಯ ಪಶ್ಚಿಮದಲ್ಲಿ ಸಣ್ಣಗೆ ಜಾರಿ ಕತ್ತಲು ಆವರಿಸುವ ಹೊತ್ತಿಗೆ ಮೂಡಿತು ಮೇಣದ ಬೆಳಕಿನ ಹೊಂಬೆಳಕು. ಹೌದು, ಇದು ಅಂತಿಂತಹ ಬೆಳಕಲ್ಲ. ನನ್ನ ಮತ, ನನ್ನ ಹಕ್ಕು ಹಾಗೂ ಮತದಾನ ಮಾಡುವವನೇ ಮಹಾಶೂರ   ಎಂಬ ಬೆಳಗಿದ ದೀಪಗಳು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮೇಣದ ಬತ್ತಿ ಹಿಡಿದು ಜಾಗೃತಿ ಮೂಡಿಸಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದರಾವ್ ಕುಲಕರ್ಣಿ ಅವರ ನೇತೃತ್ವದ ತಂಡವು ಮತದಾನ ಹಕ್ಕಿನ ಬೆಳಕು ಮೂಡಿಸಿತು. ಈ ಬೆಳಕು ಕಂಡು ಬಂದಿದ್ದು,  ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜಕಲ್ ಗ್ರಾಮದಲ್ಲಿ.
ಈ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ತಾ.ಪಂ ಇಓ ನಿಂಗಪ್ಪ ಎಸ್ ಮಸಳಿ ಅವರು ಮಾತನಾಡಿ, ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ.100 ರಷ್ಟು ಮತ ಚಲಾಯಿಸಿ ಯೋಗ್ಯ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು ಎಂದರು.
ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದರು.
ಪಿಡಿಓ ಆನಂದರಾವ್ ಕುಲಕರ್ಣಿ ಅವರು ಮಾತನಾಡಿ ಲೋಕಸಭಾ ಚುನಾವಣಾ-2024 ಅಂಗವಾಗಿ ಮತದಾನ ಜಾಗೃತಿ ಮೂಡಿಸಲು  ಗ್ರಾಮದಲ್ಲಿ ಗ್ರಾಮದ ಮಹಿಳೆಯರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು. ಮಹಿಳೆಯರು ಪಂಜಿನ ಮೆರವಣಿಗೆ, ಜಾಗೃತಿ ಜಾಥಾ ಹಾಗೂ ಜಾಗೃತಿ ಗೀತೆಗಳ ಮೂಲಕ ವಿಶೇಷ ಜಾಗೃತಿ ಮೂಡಿಸಲಾಗಿದೆ. ಈ ಸಾರಿ ನೂರಕ್ಕೆ ನೂರರಷ್ಟು ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕೆಂದು ಹೇಳಿದರು.
ಇದೆ ವೇಳೆ ತಾಲೂಕು ಪಂಚಾಯತಿ ವಿಷಯ ನಿರ್ವಾಹಕ ಸಂಗಪ್ಪ ನಂದಾಪುರ ಅವರು ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು. ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ 100 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಸಿಬ್ಬಂದಿಯಾದ ಚಂದ್ರಶೇಖರ್ ಜಿ ಹಿರೇಮಠ ಗ್ರಾಪಂ ಸಿಬ್ಬಂದಿಗಳಾದ ಹನುಮಂತಪ್ಪ, ದುರುಗಪ್ಪ, ನೀಲಕಂಠಪ್ಪ, ಹನುಮಂತಪ್ಪ, ಬಾಲಾಜಿ, ನಿಂಗಪ್ಪ, ಸ್ವಾತಿ ಬೀಳಗಿಮಠ, ಲಕ್ಷವ್ವ, ಎನ್.ಆರ್.ಎಲ್.ಎಂ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರರಾದ ಬಸಮ್ಮ, ಲಕ್ಷ್ಮಿ, ಹೇಮಾವತಿ, ಸಿದ್ದಲಿಂಗಮ್ಮ  ಹಾಗೂ  ಗ್ರಾಮದ ಗುರು ಹಿರಿಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
****

Get real time updates directly on you device, subscribe now.

Comments are closed.

error: Content is protected !!
%d bloggers like this: