ಕೋಮುವಾದವನ್ನು ಸೋಲಿಸಿ ದೇಶ ಉಳಿಸಿ ಸಂಕಲ್ಪ ಯಾತ್ರೆ
koppal ಕೋಮುವಾದವನ್ನು ಸೋಲಿಸಿ ದೇಶ ಉಳಿಸಿ ಇತರೆ ಸೌಹಾರ್ದ ಘೋಷಣೆ ಆಧಾರಿತ ಸಂಕಲ್ಪ ಯಾತ್ರೆ ಇಂದು ಕೊಪ್ಪಳ ನಗರಕ್ಕೆ ಆಗಮಿಸಿತ್ತು. ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯು ಯಾತ್ರೆಯನ್ನು ಸ್ವಾಗತಿಸಿತು.
ಈಶ್ವರ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾತ್ರೆಯ ನೇತೃತ್ವ ವಹಿಸಿದ್ದ ಶ್ರೀಪಾದ ಭಟ್ಟ ಮತ್ತು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ ಹೆಚ್.ಪೂಜಾರ, ಜಿಲ್ಲಾಧ್ಯಕ್ಷರಾದ ಬಸವರಾಜ ಶೀಲವಂತರ ಮಾತನಾಡಿದರು;
ಬಸ್ ನಿಲ್ದಾಣದ ಹತ್ತಿರ ಯಾತ್ರೆಯು ಮುಕ್ತಾಯಗೊಂಡು ಗಂಗಾವತಿಗೆ ತೆರಳಿತು ಬಸವರಾಜ ನರೆಗಲ್ , ಸಂಜಯ ದಾಸ್, ಕಾಶಪ್ಪ ಚಲುವಾದಿ ,ಲಿಂಗರಾಜ ಬೆಣಕಲ್,ಇತರರು ಭಾಗವಹಿಸಿದ್ದರು.
Comments are closed.