ರಾಷ್ಟ್ರ ಮಟ್ಟದಲ್ಲಿ ಬೆಳ್ಳಿಪದಕ ಪಡೆದ ಅವಿನಾಶ್
ಕೊಪ್ಪಳ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಬಿ ಎ ತೃತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅವಿನಾಶ್ ಇವರು ದಿನಾಂಕ 17.10.2024 ರಂದು ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ ಗುಂಟೂರು ಆಂಧ್ರಪ್ರದೇಶ ದಲ್ಲಿ ನಡೆದ 35ನೇ ದಕ್ಷಿಣ ವಲಯ ರಾಷ್ಟ್ರ ಮಟ್ಟದ ಜೂನಿಯರ್ ಅಥಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ
ಸರಪಳಿ ಗುಂಡು ಎಸೆತದಲ್ಲಿ 50.21mtr ದೂರ ಎಸೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಬಾಲಚಂದ್ರ ಸಾಕೆ ಇವರ ಬಳಿ ತರಬೇತಿ ಪಡೆದುಕೊಂಡಿದ್ದರು. ಈ ನಿಮಿತ್ಯವಾಗಿ ಪ್ರಾಂಶು ಪಾಲರಾದ ಡಾ. ಡಿ. ಎಚ್ ನಾಯ್ಕ, ದೈಹಿಕ ನಿರ್ದೇಶಕರಾದ ಮಂಜುನಾಥ ಅರೇಂಟನೂರ್ , ಪ್ರಾಧ್ಯಾಪಕರಾದ ಶಿವನಾಥ್ ಇ.ಜಿ , ವಿಜಯ ತೋಟದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.
Comments are closed.