ಬಿರುಸಿನ ಮಳೆಯ ನಡುವೆಯೂ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಕೆ
ಕೊಪ್ಪಳ: ಇಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಬಿರುಸಿನ ಮಳೆಯ ನಡುವೆಯೂ ಹುತಾತ್ಮ ಪೊಲೀರಿಗೆ ಗೌರವ ಸಲ್ಲಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ ಅವರು ಹುತಾತ್ಮ ಪೊಲೀಸರ ಹೆಸರನ್ನು ಓದಿದರು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಬಂದಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ ಸೈನಿಕರಿಗಿಂತ ದೇಶದಲ್ಲಿನ ಪೊಲೀಸರು ಹೆಚ್ಚು ಸಂಖ್ಯೆಯಲ್ಲಿ ಹುತಾತ್ಮರಾಗಿದ್ದಾರೆ. ಸೈನಿಕರಿಗೆ ಅವರ ಶತ್ರು ಯಾರು ಎಂದು ಗೊತ್ತಿರುತ್ತೆ ಆದರೆ ಪೊಲೀಸರಿಗೆ ಗೊತ್ತಿರುವುದಿಲ್ಲ. ಅವರು ಜನರ ಮಧ್ಯೆ ಇರುತ್ತಾರೆ ಎಂದರು.
ಕೆ ಕೆ ಆರ್ ಡಿ ಬಿ ಯಿಂದ ವಾಹನ ಖರೀದಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನನಂ ಪಾಂಡೆಯ, ಎಸ್ಪಿ ರಾಮ್ ಅರಸಿದ್ದಿ, ಸಿಬ್ಬಂದಿ, ಸಾರ್ವಜನಿಕರು ಇದ್ದರು.
Comments are closed.