ಗಂಗಾವತಿ ತಾಲೂಕಿನ ಚೆಕ್‌ಪೋಸ್ಟ್ ಗಳಿಗೆ ಜಿ.ಪಂ. ಸಿಇಓ ಭೇಟಿ, ಪರಿಶೀಲನೆ

0

Get real time updates directly on you device, subscribe now.

: ಗಂಗಾವತಿ ತಾಲೂಕಿನಲ್ಲಿ ತೆರೆಯಲಾದ ಮೂರು ಚೆಕ್‌ಪೋಸ್ಟ್ಗಳಿಗೆ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಬುಧವಾರ ಭೇಟಿ ನೀಡಿ ಚೆಕ್‌ಪೋಸ್ಟ್ ಗಳಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.
ಚಿಕ್ಕಜಂತಕಲ್, ಕಡೇಬಾಗಿಲು, ಜಂಗಮರ ಕಲ್ಗುಡಿ ಗ್ರಾಮದ ಚೆಕ್‌ಪೋಸ್ಟ್ಗಳಲ್ಲಿನ ಕುಡಿವ ನೀರು, ಬ್ಯಾಟರಿ, ವಿದ್ಯುತ್, ಗಾಳಿ ವ್ಯವಸ್ಥೆ ಪರಿಶೀಲಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಿದ್ದು, ಚೆಕ್‌ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲ ವಾಹನಗಳ ತಪಾಸಣೆ ನಡೆಸಬೇಕು ಎಂದು ಸಿಬ್ಬಂದಿಗಳಿಗೆ ಸಿಇಓ ಅವರು ಸೂಚನೆ ನೀಡಿದರು.
ಈ ವೇಳೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಆನೆಗೊಂದಿ, ಜಂಗಮರ ಕಲ್ಗುಡಿ, ಚಿಕ್ಕಜಂತಕಲ್ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೇರಿ ಚೆಕ್‌ಪೋಸ್ಟ್ ಸಿಬ್ಬಂದಿಗಳು ಹಾಜರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: