Sign in
Sign in
Recover your password.
A password will be e-mailed to you.
ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರಕಾರದ ಜನಪರ ಆಡಳಿತ ಮತ್ತು ಸ್ಥಳಿಯ ಶಾಸಕರು ಅವಿರತ ಸೇವೆ ಪರಿಗಣಿಸಿ ಕಾಂಗ್ರೆಸ್ ಸೇರಿದ ಬಿಜೆಪಿ ನಗರಸಭೆ ಸದಸ್ಯ ರಾಜಶೇಖರ್ ಆಡೂರ್ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ನೇತೃತ್ವದಲ್ಲಿ ಸ್ವಾಗತಿಸಿದರು.
ನಗರದ ವಾರಕಾರ ಓಣಿಯ ಅವರ ಮನೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಲೋಕಸಭೆ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರನ್ನು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಸ್ವಾಗತಿಸಿದರು.
ನಗರಸಭೆ ಸದಸ್ಯರಾಗಿ, ಶ್ರೀ ಗವಿಸಿದ್ಧೇಶ್ವರ ಬ್ಯಾಂಕ್‌ಗೆ ಎರಡು ಬಾರಿ ಅಧ್ಯಕ್ಷರಾಗಿ ಜನಪರವಾಗಿ ಸೇವೆ ಮಾಡಿರುವ ರಾಜಶೇಖರ್ ಅವರ ಆಗಮನದಿಂದ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ, ಎಸ್.ಟಿ. ಘಟಕ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಅಕ್ಬರ್ ಪಾಶಾ, ಮುತ್ತುರಾಜ ಕುಷ್ಟಗಿ, ಕುರಗೋಡ ರವಿ ಯಾದವ್, ಪ್ರಸನ್ನ ಗಡಾದ, ಶರಣಪ್ಪ ಸಜ್ಜನ, ಕೆ.ಎಂ. ಸೈಯ್ಯದ್, ಬಾಲಚಂದ್ರ ಶ್ಯಾಮುಯೇಲ್ ಇತರರು ಇದ್ದರು.
Get real time updates directly on you device, subscribe now.
Comments are closed.