ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕೊಪ್ಪಳ : ೩೦ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹೊಸ್ತಿನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹಳ್ಳಿಗಳ ೧೫೦-೨೦೦ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು ನೇತೃತ್ವದಲ್ಲಿ ಪ್ರಸನ್ನ ಗಡಾದ, ಗೂಳಪ್ಪ ಹಲಗೇರಿ ಅಮರೇಶ ಉಪಲಾಪುರ ಮತ್ತು ಯಲ್ಲಪ್ಪ ಹಳೇಮನಿ ಇವರ ಭಾಗಿತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪ್ರಸನ್ನ ಗಡಾದ ಗೂಳಪ್ಪ ಹಲಗೇರಿ ಬಾಲಚಂದ್ರನ್ ಅಮರೇಶ ಉಪಲಾಪುರ ಗಾಳೆಪ್ಪ ಪೂಜಾರ ರಾಮಣ್ಣ ಚೌಡ್ಕಿ ನಿಂಗಜ್ಜ ಶಹಪೂರ ಮಾದಿನೂರು ಗ್ರಾ ಪಂ ಅಧ್ಯಕ್ಷರ ಪತಿ ಯಲ್ಲಪ್ಪ ಹಳೇಮನಿ, ಶರಣಪ್ಪ ಸಾಲಮನಿ, ದುರುಗೇಶ ನರೇಗಲ್ ಸೇರಿದಂತೆ ಅನೇಕ ಮುಖಂಡರು ಹಾಗೂ ಅಪಾರ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.
Comments are closed.