ಐದು ಗ್ಯಾರಂಟಿ ಸ್ಕೀಂ ಬಡವರ ಜೀವನಕ್ಕೆ ಆಧಾರ ಸ್ತಂಭಗಳಾಗಿವೆ : ಪರಶುರಾಮ ಕೆರೆಹಳ್ಳಿ

Get real time updates directly on you device, subscribe now.

ಕೊಪ್ಪಳ ಮನೆ ಮನೆಗೆ ತೆರೆಳಿ ಐದು ಗ್ಯಾರಂಟಿ ಸ್ಕೀಂಗಳ ಬಗ್ಗೆ ತಿಳಿಸಿ ಅದರ ಸದುಪಯೋಗ ಪಡೆದುಕೊಳ್ಳುವಂತೆ ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ಪರಶುರಾಮ ಕೆರೆಹಳ್ಳಿ ತಿಳಿಸಿದರು.
  ಅವರು ನಗರದ ೨೯ನೇ ವಾರ್ಡ್‌ನಲ್ಲಿ ಮನೆ ಮನೆಗೆ ತೆರೆಳಿ ಕಾಂಗ್ರೆಸ್ ಬಡಜನರಿಗಾಗಿ ಮಾಡಿರುವ ಅನ್ನಭಾಗ್ಯ, ಯುವನಿಧಿ, ಗೃಹಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಐದು ಗ್ಯಾರಂಟಿಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಅವಿರತ ಶ್ರಮ ಮತ್ತು ಜನರ ಆಸಕ್ತಿಯಿಂದಾಗಿ ಯೋಜನೆ ಅನುಷ್ಠಾನ ಉತ್ತಮವಾಗಿದೆ. ಗ್ಯಾರಂಟಿ ಸ್ಕೀಂ ಎಲ್ಲಾ ಯೋಜನೆಯ ಹಣ ಡಿಬಿಟಿ ಮೂಲಕ ನೇರ ವರ್ಗಾವಣೆ ಆಗುತ್ತವೆ, ಇಲ್ಲಿ ಯಾರೂ ಮೋಸ ಮಾಡಲು ಸಾಧ್ಯವಿಲ್ಲ ಎಂದರು. ಇದೇ ಸಂದರ್ಭದಲ್ಲಿ ಮನೆ-ಮನೆ ಭೇಟಿ ವೇಳೆ ಕಂಡುಬಂದ ಮಾಹಿತಿ ಹಂಚಿಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನು?ನ ಸಮಿತಿಯ ತಾಲೂಕ ಅಧ್ಯಕ್ಷರು ಬಾಲಚಂದ್ರ ಮುನಿರಾಬಾದ್, ಗ್ರಾಮೀಣ ಬ್ಲಾಕ್ ಅಧ್ಯಕ್ಷೆ ರೇ? ಖಾಜಾವಲಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಎಸ್ಸಿ ಘಟಕ ಕಾವೇರಿ ರ್‍ಯಾಗಿ ,ಪರಶುರಾಮ ಕೊರವರ್ ಅನು?ನ ಸಮಿತಿಯ ಸದಸ್ಯರು, ಮಹೇಶ್ ಭಜಂತ್ರಿ, ಸೌಭಾಗ್ಯ ಗೊರವರ್, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ. ಶೈಲಜಾ, ನಾಗರಾಜ್ ಉಳ್ಳಾಗಡ್ಡಿ, ಸೈಯದ್ ಕಾಸಿಂಸಾಬ್, ಮಂಜುನಾಥ್‌ಬೂದಿಹಾಳ, ಅಜ್ಜು ಸೌದಾಗರ್ ಮತ್ತೀತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: